ಕುಂದಾಪುರ: ಆಯಿಲ್ ಮಿಲ್ ಗೆ ಬೆಂಕಿ ಅವಘಢ: ಅಪಾರ ನಷ್ಟ
ಕುಂದಾಪುರ: ಆಯಿಲ್ ಮಿಲ್ ಒಂದರಲ್ಲಿ ಬೆಂಕಿ ಅವಘಢ ಸಂಭವಿಸಿ ಅಪಾರ ನಷ್ಟವಾದ ಘಟನೆ ಕುಂದಾಪುರ ತಾಲೂಕಿನ ಸಿದ್ದಾಪುರದ ಜನ್ಸಾಲೆ ಎಂಬಲ್ಲಿ ಬುಧವಾರ ತಡರಾತ್ರಿ ಸಂಭವಿಸಿದೆ.
ಬುಧವಾರ ತಡರಾತ್ರಿ ಶ್ರೀ ಮಧುಮಾಯ ಆಯಿಲ್ಸ್(ಮಧು) ಫ್ಯಾಕ್ಟರಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಕೂಡಲೇ ಕುಂದಾಪುರ, ಬೈಂದೂರು ಹಾಗೂ ಹೊಸಂಗಡಿ ಕೆಪಿಟಿಸಿಎಲ್ ನಿಂದ ತಲಾ ಒಂದೊಂದು ವಾಹನಗಳು ಸ್ಥಳಕ್ಕೆ ದೌಡಾಯಿಸಿದ್ದು ಸ್ಥಳೀಯರ ಸಹಕಾರದಲ್ಲಿ ರಾತ್ರಿಯಿಂದ ಬೆಳಗ್ಗೆ 9ರ ವರೆಗೆ ಬೆಂಕಿ ನಂದಿಸುವ ಕಾರ್ಯಾಚರಣೆ ತೊಡಗಿಸಿಕೊಂಡಿದ್ದಾರೆ. ತೆಂಗಿನೆಣ್ಣೆ ಆದ ಕಾರಣ ಬೆಂಕಿ ತೀವೃತೆ ಜಾಸ್ತಿಯಾಗಿತ್ತು. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಬೆಂಕಿ ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ.




