February 4, 2026

ಚೇಳು ಕಡಿದು ಚಿಕಿ‌‌‌ತ್ಸೆ ಪಡೆದುಕೊಳ್ಳದ ಯುವಕ ಮೂರೇ ದಿನದಲ್ಲಿ ಮೃತ್ಯು

0
image_editor_output_image823784295-1640684236541.jpg

ಧಾರವಾಡ: ಚೇಳು ಕಡಿದು ಚಿಕಿತ್ಸೆ ಪಡೆದುಕೊಳ್ಳದ ಯುವಕನಿಗೆ ಆರೋಗ್ಯದಲ್ಲಿ ಏರುಪೇರಾಗಿ ಸಾವಿಗೀಡಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹೆಬ್ಬಳ್ಳಿ ಗ್ರಾಮದ ಯಲ್ಲಪ್ಪ ಮೃತ ದುರ್ದೈವಿ. ಯಲ್ಲಪ್ಪ ಮನೆಯಲ್ಲಿ ಚೇಳು ಕಡಿದು ಮೂರು ದಿನವಾದರೂ ಚಿಕಿತ್ಸೆ ಪಡೆದಿರಲಿಲ್ಲ. ಆದರೆ ಮೂರು ದಿನಗಳ ನಂತರ ಅಸ್ವಸ್ಥಗೊಂಡಿದ್ದು, ಆತನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಆತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಶವವನ್ನು ಮರಣೋತ್ತರ ಪರೀಕ್ಷೆ  ನಡೆಸಲಾಗಿದೆ. ಈ ಘಟನೆ ಬಗ್ಗೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!