January 31, 2026

ಕೊಳ್ನಾಡು; ನಾರ್ಶ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

0
IMG-20251229-WA0077

ಕೊಳ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ನಾರ್ಶ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೊಳ್ನಾಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರೂ,ಸ್ಥಳೀಯ ಸದಸ್ಯರಾದ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ  ಅದ್ಯಕ್ಷತೆ ವಹಿಸಿ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳ ಬದುಕಿನಲ್ಲಿ “ಎರಡನೇ ತಾಯಿ”ಯ ಸ್ಥಾನವನ್ನು ಹೊಂದಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಮಕ್ಕಳ  ಆರೈಕೆ, ಪೋಷಣೆ ಹಾಗೂ ಮೌಲ್ಯಗಳ ಬೀಜ ಬಿತ್ತುವಲ್ಲಿ ಅಂಗನವಾಡಿ ಕೇಂದ್ರಗಳ ಪಾತ್ರ ಅಮೂಲ್ಯವೆಂದು ಅವರು ಹೇಳಿದರು.

ಮಗು ತಾಯಿಯಿಂದ ಮೊದಲಾಗಿ ಸಂಪರ್ಕಿಸುವ ಶಿಕ್ಷಣಾತ್ಮಕ ವಾತಾವರಣವೇ ಅಂಗನವಾಡಿ ಕೇಂದ್ರ. ಇಲ್ಲಿ ಕಾರ್ಯನಿರ್ವಹಿಸುವ ಕಾರ್ಯಕರ್ತೆಯರು ಕೇವಲ ಪಾಠ ಹೇಳುವವರಲ್ಲ; ಮಕ್ಕಳ ಆರೋಗ್ಯ, ಆಹಾರ, ನಡವಳಿಕೆ ಹಾಗೂ ಭವಿಷ್ಯದ ದಿಕ್ಕು ರೂಪಿಸುವ ಶಿಲ್ಪಿಗಳಾಗಿದ್ದಾರೆ. ಮಕ್ಕಳಲ್ಲಿ ಆತ್ಮವಿಶ್ವಾಸ, ಶಿಸ್ತು ಮತ್ತು ಸಮಾಜಮುಖಿ ಗುಣಗಳನ್ನು ಬೆಳೆಸುವಲ್ಲಿ ಇವರ ಸೇವೆ ನಿರಂತರವಾಗಿದ್ದು, ಈ ಹೊಣೆಗಾರಿಕೆಯನ್ನು ತಾಯಿಯಂತೆ ನಿಭಾಯಿಸುತ್ತಿರುವುದು ಶ್ಲಾಘನೀಯವೆಂದು ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಹೇಳಿದರು.

ಮಕ್ಕಳ ಹಕ್ಕುಗಳು, ಶಿಕ್ಷಣ ಮತ್ತು ಸಮಗ್ರ ಬೆಳವಣಿಗೆಗೆ ಸಮಾಜ ಒಟ್ಟಾಗಿ ಆರೋಗ್ಯಕರ ವಾತಾವರಣ ನಿರ್ಮಿಸಬೇಕೆಂದು ಪುಟಾಣಿ ಮಕ್ಕಳ ಆಟೋಟ‌ ಸ್ಪರ್ದೆ,ಕಲಿಕಾ ಬಹುಮಾನದ ಪ್ರಯೋಜಕರಾದ ಲಯನ್ಸ್ ಕ್ಲಬ್ ಮಂಚಿ- ಕೊಳ್ನಾಡು ಮಾಜಿ ಅದ್ಯಕ್ಷರೂ,ಸಮಾಜಸೇವಕರಾದ ಲ|ಬಾಲಕೃಷ್ಣ ಸೆರ್ಕಳ ತಿಳಿಸಿದರು.

2025 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಅಂಗನವಾಡಿ ಕೇಂದ್ರ ಅಭಿವೃದ್ಧಿಗೆ ಸಂಘ ಸಂಸ್ಥೆಗಳ ಕೊಂಡಿಯಾಗಿ ಕೆಲಸ ನಿರ್ವಹಿಸಿದ ಹಸೈನಾರ್ ತಾಳಿತ್ತನೂಜಿ ಅವರನ್ನು ಬಾಲವಿಕಾಸ ಸಮಿತಿ ವತಿಯಿಂದ ಈ ಸಂದರ್ಭದಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಅತಿಹೆಚ್ಚು ಮಕ್ಕಳ ದಾಖಲಾತಿಯನ್ನು ಸಾಧಿಸಿರುವ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ, ವಿವಿಧ ಸೃಜನಾತ್ಮಕ ಹಾಗೂ ಪೌಷ್ಟಿಕ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಡೆಸಲಾಗುತ್ತಿದೆ. ದಾನಿಗಳ ಸಹಕಾರದಿಂದ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಅಂಗನವಾಡಿ ಪ್ರಗತಿಗೆ, ಅಭಿವೃದ್ಧಿಗೆ ಕೈಜೋಡಿಸಿದ ಜಯಂತಿಯವರ ಸೇವೆಯನ್ನು ಈ ಸಂದರ್ಭದಲ್ಲಿ ಸ್ಮರಿಸಿ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಲಾಯಿತು. ಮಕ್ಕಳ ಸಮಗ್ರ ಬೆಳವಣಿಗೆಯಲ್ಲಿ ನಿರಂತರ ಶ್ರಮವಹಿಸುತ್ತಿರುವ  ಸೇವಾಭಾವ ಹೊಂದಿರುವ ಕಾರ್ಯಕರ್ತೆಗೆ  ಶುಭವಾಗಲಿ ಎಂದು ಹಾರೈಸಿದರು.

ಪುಟಾಣಿ ಮಕ್ಕಳಿಗೆ ಹಸೈನಾರ್ ತಾಳಿತ್ತನೂಜಿ ಕೋರಿಕೆಗೆ ಸ್ಪಂದಿಸಿ ಅಸಿಸ್ಟೆಂಟ್ ಗವರ್ನರ್ ಝೋನ್-4 ರೋಟರಿ ಕ್ಲಭ್ ಬಿ.ಸಿ ರೋಡ್ ಸಿಟಿಯ ರೊ| ಶ್ರೀ ಪದ್ಮನಾಭ ರೈಯವರು 20 ಕುರ್ಚಿಗಳನ್ನು ಕೊಡುಗೆಯಾಗಿ ನೀಡಿರುತ್ತಾರೆ ಇವರಿಗೆ ಧನ್ಯವಾದ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಬಾಲವಿಕಾಸ ಸಮಿತಿ ಅದ್ಯಕ್ಷರಾದ ಶ್ರೀಮತಿ ಬುಶ್ರಾ,ಪ್ರೌಡಶಾಲಾ ಮುಖ್ಯೋಪಾಧ್ಯಾಯಕರಾದ ಶ್ರೀಯುತ ಗೋಪಾಲಕೃಷ್ಣ, ಸಹಾಯಕ ಶಿಸು ಅಭಿವೃದ್ಧಿ ಯೋಜನಾಧಿಕಾರಿ ಶಾರದ,ಕೊಳ್ನಾಡು ವಲಯ ಮೇಲ್ವಿಚಾರಕಿ ರೇಣುಕಾ ಮೇಡಂ,ಬಾಲವಿಕಾಸ ಸಮಿತಿಯ ಉಪಾಧ್ಯಕ್ಷರಾದ ಶ್ರೀಮತಿ ಅಶ್ವಿನಿ,ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಜಯಂತಿ.ಕೆ,ಅಂಗನವಾಡಿ ಸಹಾಯಕಿ ಶ್ರೀಮತಿ ಚಂದ್ರಾವತಿ,ಪೋಷಕರು,ಬಾಲವಿಕಾಸ ಸಮಿತಿಯ ಸದಸ್ಯರು ಉಪಸ್ಥಿತಿತರಿದ್ದರು*

Leave a Reply

Your email address will not be published. Required fields are marked *

error: Content is protected !!