ಕುಲಾಲ ಸಂಘ (ರಿ.)ವಿಟ್ಲ: ವಾರ್ಷಿಕೋತ್ಸವ ಮತ್ತು ಸತ್ಯನಾರಾಯಣ ಪೂಜೆ
ವಿಟ್ಲ: ಕುಲಾಲ ಸಂಘ (ರಿ.)ವಿಟ್ಲ ಇದರ 27ನೆ ವರ್ಷದ ವಾರ್ಷಿಕೋತ್ಸವ ಮತ್ತು ಸತ್ಯನಾರಾಯಣ ಪೂಜೆಯು “ಕುಲಾಲ ರಜತಭವನ” ವಿಟ್ಲ ದಲ್ಲಿ ಜರಗಿತು.
ವಿಟ್ಲ ಉದಯೇಶ ಕೆದಿಲಾಯರ ಪೌರೋಹಿತ್ಯದಲ್ಲಿ ಗಣಹೋಮ, ಸತ್ಯನಾರಾಯಣ ಪೂಜೆಯು ಸಮಾಜದ ಬಂಧು ಭಗಿನಿಯರಿಂದ ಭಜನಾ ಕಾರ್ಯಕ್ರಮದೊಂದಿಗೆ ನೆರವೇರಿತು. ಧರ್ಮದ ಉಳಿವಿಗೆ ಸಹಮತದ ಬದುಕು ಬೇಕು. ಭಿನ್ನಾಭಿಪ್ರಾಯ ಕುಲದೊಳಗೆ ಸಲ್ಲದು, ಗುರಿ ಸೇರಲು ಗುರುವಿರಬೇಕೆಂದು ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಶಿವಾನಂದ ಸ್ವಾಮಿಗಳು, ಶ್ರೀ ವೈಷ್ಣವಿ ಕ್ಷೇತ್ರ, ಮುಳಿಯ ಅಶಿರ್ವಚನವಿತ್ತರು. “ಸಮಾಜದೊಳಗೆ ನಂಟಿರಬೇಕು ಅಲ್ಲೊಂದು ಒಮ್ಮತದ ಗಂಟಿರಬೇಕು, ಇದಕ್ಕಾಗಿ ಮುಂದಿನ ಪೀಳಿಗೆಯನ್ನು ಸಂಸ್ಕಾರವಂತರನ್ನಾಗಿ ಮಾಡುವ ಯತ್ನ ಸಾಗಬೇಕೆಂದು ಮಹೇಶ್ ಕೆ.ಸವಣೂರು ವಕೀಲರು, ಕಡಬ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಚಂದಪ್ಪ ಮೂಲ್ಯನಿವೃತ್ತ ಡೆಪ್ಯುಟಿ ಕಮಾಂಡೆಂಟ್ (BSF) ಮತ್ತು ಅಮೂಲ್ಯ ಗ್ಯಾಸ್ ಏಜೆನ್ಸಿ ಉಪ್ಪಿನಂಗಡಿ, ಕರುಣಾಕರ ವಿ. ಮುಖ್ಯಾಧಿಕಾರಿಗಳು , ವಿಟ್ಲ ಪಟ್ಟಣ ಪಂಚಾಯತ್, ಶಶಿಕಲಾ ಕೆ. ಸಹ ಪ್ರಾಧ್ಯಾಪಕರು, ಸರಕಾರಿ ಪ್ರಥಮ ದರ್ಜೆ ಕಾಲೇಜು ವಿಟ್ಲ, ಕುಲಾಲ ಮಹಿಳಾ ಘಟಕದ ಅಧ್ಯಕ್ಷೆ ವಾರಿಜಾ ಬಾಬು ಮೂಲ್ಯ ಮರ್ನೆಮಿ ಗುಡ್ಡೆ, ಉಪಸ್ಥಿತರಿದ್ದರು. ಕುಲಾಲ ಸಂಘದ ಅಧ್ಯಕ್ಷ ಬಿ. ಕೆ ಬಾಬು ಅಧ್ಯಕ್ಷತೆ ವಹಿಸಿದ್ದರು. ಸ್ಥಾಪಕಾಧ್ಯಕ್ಷ ರಮಾನಾಥ ವಿಟ್ಲ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಉಪಾಧ್ಯಕ್ಷ ನಾರಾಯಣ ಮೂಲ್ಯ ಪೆತ್ತಮುಗೇರು ವಂದನಾರ್ಪಣೆಗೈದರು. ಗಾಯತ್ರಿ ಲೋಹಿತ್ ಏರುಂಬು ಪ್ರಾರ್ಥನೆ ಹಾಡಿದರು. ಕಳೆದ ವರ್ಷದ ಹತ್ತನೇ ತರಗತಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಗೊಂಡ ಕುಲಾಲ ಸಮಾಜದ ಶ್ರವಣ ಕುಮಾರ್, ಹೇಮಾನ್ಯ ಆರ್. ಕೆ, ಜಿತಿನ್ ಆರ್.ಕೃಷ್ಣ ರವರನ್ನು ಗೌರವಿಸಿ ಪುರಸ್ಕರಿಸಲಾಯಿತು. ಕುಲಾಲ ಸಮಾಜದ 10ನೆ, 9ನೆ, ಮತ್ತು 8ನೆ ತರಗತಿಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಗುರುತಿಸಲಾಯಿತು. ವಾರ್ಷಿಕೋತ್ಸವದ ನಿಮಿತ್ತ ಸಂಘಟಿಸಿದ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಅನುರಾಧ ದೀಪಕ್, ರೇವತಿ ರವೀಂದ್ರ, ಜಯಲಕ್ಷ್ಮಿ, ಬಹುಮಾನ ವಿತರಣೆ ಯಲ್ಲಿ ಸಹಕರಿಸಿದರು.
ರಾಧಾಕೃಷ್ಣ ಎರುಂಬು ಹಾಗೂ ಜಿತಿನ್ ಕೃಷ್ಣ ಎರುಂಬು ಕಾರ್ಯಕ್ರಮ ನಿರೂಪಿಸಿದರು. ಮದ್ಯಾಹ್ನ ಅನ್ನಸಂತರ್ಪಣೆಯ ಬಳಿಕ ಸಾಂಸ್ಕೃತಿಕ ಕಾರ್ಯದರ್ಶಿ ಸುರೇಶ್ ಕುಲಾಲ್ ಮತ್ತು ಬಳಗದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.




