December 21, 2025

ವಿಟ್ಲ: ನಾಡಕಚೇರಿಯಲ್ಲಿ ಲಿಯೋ ಕ್ಲಬ್ ವತಿಯಿಂದ ನಿರ್ಮಿಸಲಾದ ಸಾರ್ವಜನಿಕ ಶೌಚಾಲಯ ಉದ್ಘಾಟನೆ

0
image_editor_output_image-1557380417-1766327255213

ವಿಟ್ಲ: ಲಿಯೋ ಕ್ಲಬ್ ವತಿಯಿಂದ ವಿಟ್ಲ ನಾಡಕಛೇರಿಯಲ್ಲಿ ಸಾರ್ವಜನಿಕ ಶೌಚಾಲಯ ಉದ್ಘಾಟಿಸಲಾಯಿತು.

ಲಯನ್ಸ್ ಜಿಲ್ಲೆ 317ಡಿ ಇದರ ಲಿಯೋ ಅಧ್ಯಕ್ಷರು ಆದ ಲಿಯೋ ಲಯನ್ ಶ್ರೀನಿಧಿ ಶೆಟ್ಟಿ ಇವರು ಉದ್ಘಾಟನೆಯನ್ನು ನೆರವೇರಿಸಿದರು. ವಿಟ್ಲ ಲಿಯೋ ಕ್ಲಬ್ ಅಧ್ಯಕ್ಷರು ಆದ ಪ್ರಾಪ್ತಿ ಶೆಟ್ಟಿ ಯವರು ಎಲ್ಲರನ್ನು ಸ್ವಾಗತಿಸಿ ತಮ್ಮ ತಂದೆಯವರು ಕೆಲಸ ಮಾಡುತ್ತಿರುವ ಕಚೇರಿಯಲ್ಲಿ ಶೌಚಾಲಯದ ಕೊರತೆಯ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದದನ್ನು ಕಂಡು ತಾವು ಏನಾದರೂ ಮಾಡಬೇಕೆಂದು ಯೋಚಿಸಿ ಲಿಯೋ ಕಾರ್ಯದರ್ಶಿ ಆಗಿರುವ ಸಾಗರ್ ಎನ್ ಹಾಗೂ ಕೋಶಾಧಿಕಾರಿಯಾಗಿವ ಅನಘ ಇವರಲ್ಲಿ ಚರ್ಚಿಸಿ ತಮ್ಮ ಉಳಿಕೆ ಹಣದಲ್ಲಿ ಕಾಮಗಾರಿ ಶುರು ಮಾಡಿದೆವು, ಕಾಮಗಾರಿಗೆ ಹಣ ಸಾಲದಾಗ ತಮ್ಮ ಪೋಷಕರಲ್ಲಿ ವಿನಂತಿಸಿ ಹಾಗೂ ಇತರ ದಾನಿಗಳನ್ನು ಸಂಪರ್ಕಿಸಿ ಉತ್ತಮ ಗುಣಮಟ್ಟದ 3 ಶೌಚಾಲಯವನ್ನು ನಿರ್ಮಿಸಿ ಸಾರ್ವಜನಿಕ ಉಪಯೋಗಕ್ಕೆ ಹಸ್ತಾಂತರಿಸುತ್ತಿದ್ದೇವೆ ಎಂದು ಹೇಳಿದರು.

ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಕರುಣಾಕರ ನಾಯ್ತೋಟ್ಟು ಇವರು ನಾಮ ಫಲಕವನ್ನು ಅನಾವರಣಗೊಳಿಸಿ ಲಿಯೋ ಸೇವೆಯನ್ನು ಶ್ಲಾಘಸಿದರು.

ಮುಖ್ಯ ಅತಿಥಿಗಳಾಗಿ ಲಯನ್ಸ್ ಸಂಸ್ಥೆಯ ಪೂರ್ವ ರಾಜ್ಯಪಾಲರಾದ ಡಾ. ಗೀತ ಪ್ರಕಾಶ್ ಇವರು ಮಾತನಾಡಿ ಸಾರ್ವಜನಿಕ ಶೌಚಾಲಯದ ಶುಚಿತ್ವ ಕಾಪಾಡುವ ಅಗತ್ಯದ ಬಗ್ಗೆ ಮಾತನಾಡಿದರು ವಿಟ್ಲ ಲಯನ್ಸ್ ಕ್ಲಬ್ ಇದರ ಅಧ್ಯಕ್ಷರಾದ ಸಂಜೀವ ಪೂಜಾರಿ. ಹಾಗೂ ಲಯನ್ಸ್ ಕ್ಲಬ್ ನ ವಲಯಧಿಕಾರಿಗಳಾದ ಜೆಸಿಂತಾ ಮಸ್ಕರೇನಿಯಸ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ವಿಟ್ಲ ಇದರ ಕೋಶಾಧಿಕಾರಿ ದೇವಿ ಪ್ರಸಾದ್ ಶೆಟ್ಟಿ ದಕ್ಷಿಣ ಕನ್ನಡ ಗ್ರಾಮ ಆಡಳಿತ ಅಧಿಕಾರಿ ಸಂಘದ ಅಧ್ಯಕ್ಷರಾದ ಅನಿಲ್ ಕುಮಾರ್, ಪುತ್ತೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಅಬ್ಬು ನವಗ್ರಾಮ, ಲಯನ್ಸ್ ಪೂರ್ವ ವಲಯ ಅಧಿಕಾರಿ ವಿನ್ನಿ ಮಸ್ಕರೇನಿಯಸ್, ಲಯನ್ಸ್ ಈ ಕಡೆ ಪೂರ್ವ ಅಧ್ಯಕ್ಷರಾದ ರಜಿತ್ ಆಳ್ವ,ಲಿಯೋ ಅಡ್ವೈಸರ್ ಆದ ಸುಮತಿ ದೇಜಪ್ಪ ನಿಡ್ಯ, ಲಯನ್ ಪುಷ್ಪಲತಾ, ಲಯನ್ ಲಕ್ಷ್ಮಣ್ ಟಿ ನಾಯ್ಕ್, ಲಯನ್ ಡೇವಿಡ್ ವೇಗಸ್ , ಲಯನ್ ವಿಮಲಾ ರೈ, ಲಿಯೋ ಸೃಷ್ಟಿ ಉಪಸ್ಥಿತರಿದ್ದರು. ಆಶಾ ಶೆಟ್ಟಿ ಹಾಗೂ ಲಯನ್ ಗಿರೀಶ್ ಶೆಟ್ಟಿ ದಂಪತಿಗಳು ಸಹಕರಿಸಿದವರಿಗೆ ಧನ್ಯವಾದ ಅರ್ಪಿಸಿ ಭೋಜನ ಕೂಟವನ್ನು ಆಯೋಜಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!