RSSಗೆ ಯಾರೂ ಶತ್ರುಗಳಿಲ್ಲ: ಮೋಹನ್ ಭಾಗವತ್
ಕೋಲ್ಕತ್ತಾ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಬಗ್ಗೆ ದಾರಿತಪ್ಪಿಸುವ ಪ್ರಚಾರಗಳಿಂದಾಗಿ ಸಮಾಜದ ಒಂದು ವರ್ಗದಲ್ಲಿ ತಪ್ಪು ಕಲ್ಪನೆಗಳು ಮೂಡಿವೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಭಾನುವಾರ ಹೇಳಿದ್ದಾರೆ.
ಆರ್‌ಎಸ್‌ಎಸ್‌ನ ಶತಮಾನೋತ್ಸವ ಆಚರಣೆಯ ಅಂಗವಾಗಿ ಇಲ್ಲಿನ ಸೈನ್ಸ್ ಸಿಟಿಯಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಸಂಘಕ್ಕೆ ಯಾರೂ ಶತ್ರುಗಳಿಲ್ಲ. ಆದರೆ ಸಂಘವು ಬಲಗೊಂಡರೆ ಸಂಕುಚಿತ ಹಿತಾಸಕ್ತಿಯ ವ್ಯಕ್ತಿಗಳ ಅಂಗಡಿಗಳು ಮುಚ್ಚುತ್ತವೆ ಎಂಬ ಭಯ ಅವರಿಗಿದೆ. ಯಾರೇ ಆದರೂ ಆರ್‌ಎಸ್‌ಎಸ್ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವ ಮೊದಲು ವಾಸ್ತವವನ್ನು ಅರಿಯಬೇಕು. ಕೇವಲ ಕೇಳಿಬಂದ ಮಾಹಿತಿ ಅಥವಾ ಪಿತೂರಿಗಳ ಆಧಾರದ ಮೇಲೆ ನಿರೂಪಣೆಗಳನ್ನು ಸೃಷ್ಟಿಸಬಾರದು” ಎಂದು ಹೇಳಿದರು.





