ವಿಟ್ಲ: ಸುಪ್ರಜಿತ್ ಫೌಂಡೇಶನ್ ಬೆಂಗಳೂರು ಇದರ ವತಿಯಿಂದ ಬಂಟ್ವಾಳ ತಾಲೂಕಿನ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ
ವಿಟ್ಲ: ಸುಪ್ರಜಿತ್ ಫೌಂಡೇಶನ್ ಬೆಂಗಳೂರು ಇದರ ವತಿಯಿಂದ ಬಂಟ್ವಾಳ ತಾಲೂಕಿನ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಕಾರ್ಯಕ್ರಮ ವಿಟ್ಠಲ ಎಜುಕೇಶನ್ ಸೊಸೈಟಿ ಯ ಸುವರ್ಣ ರಂಗ ಮಂದಿರದಲ್ಲಿ ನಡೆಯಿತು.
779 ವಿದ್ಯಾರ್ಥಿಗಳಿಗೆ ಒಟ್ಟು 53,49,500 ರುಪಾಯಿ ವಿದ್ಯಾರ್ಥಿ ವೇತನವನ್ನು ಸುಪ್ರಜಿತ್ ಫೌಂಡೇಶನ್ ಬೆಂಗಳೂರು ಇದರ ಅಧ್ಯಕ್ಷ ಅಜಿತ್ ಕುಮಾರ್ ರೈ ಇವರು ನೀಡಿದರು.
ಇದರಲ್ಲಿ 116 ವಿದ್ಯಾರ್ಥಿಗಳು ವಿಶೇಷ ವಿದ್ಯಾರ್ಥಿ ವೇತನ ಪಡೆದರು. ಸತತ ಹದಿನೈದು ವರ್ಷಗಳಿಂದ ನಡೆದು ಬಂದ ಈ ವಿದ್ಯಾರ್ಥಿ ವೇತನದಲ್ಲಿ 2625 ಮಂದಿ ವಿದ್ಯಾರ್ಥಿಗಳು ಸುಮಾರು 5 ಕೋಟಿಗೂ ಹೆಚ್ಚು ವಿದ್ಯಾರ್ಥಿ ವೇತನ ಪಡೆದಿರುತ್ತಾರೆ. ವಿಟ್ಠಲ ಎಜುಕೇಶನ್ ಸೊಸೈಟಿ ಅಧ್ಯಕ್ಷ ಮುಗುಳಿ ತಿರುಮಲೇಶ್ವರ ಭಟ್, ವಿಟ್ಠಲ ಸುಪ್ರಜಿತ್ ಐಟಿಐ ಸಂಚಾಲಕ ಅಲ್ಫಾನ್ಸೊ ಸಿಲ್ವೆಸ್ಟರ್ ಮಸ್ಕರೇನಸ್ ಅತಿಥಿಗಳಾಗಿ ಭಾಗವಹಿಸಿದ್ದರು.
ವಿಟ್ಠಲ ಪ್ರೌಢಶಾಲೆಯ ಉಪ ಪ್ರಾಂಶುಪಾಲ ಕಿರಣ್ ಕುಮಾರ್ ಬ್ರಹ್ಮಾವರ ಸ್ವಾಗತಿಸಿದರು. ವಿಟ್ಠಲ ಎಜುಕೇಶನ್ ಸೊಸೈಟಿ ಉಪಾಧ್ಯಕ್ಷ ವಿದ್ಯಾರ್ಥಿ ವೇತನ ಸಮಿತಿ ಅಧ್ಯಕ್ಷ ಸುಬ್ರಾಯ ಪೈ ಪ್ರಸ್ತಾವಿಸಿದರು. ಆಡಳಿತ ಅಧಿಕಾರಿ ಪ್ರಶಾಂತ ಚೊಕ್ಕಾಡಿ ವಂದಿಸಿದರು. ರಾಜಶೇಖರ ನಿರೂಪಿಸಿದರು. ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ, ಶ್ರೀಪತಿ ನಾಯಕ್, ಬಿ ಮೋಹನ್, ಲಕ್ಷ್ಮಣ ನಾಯ್ಕ, ಅಲ್ಫಾನ್ಸ್ ವಿನ್ಸೆಂಟ್ ವೇಗಸ್, ಲೋಕಾನಂದ ಸಹಕರಿಸಿದರು. ವಿಟ್ಠಲ ಎಜುಕೇಶನ್ ಸೊಸೈಟಿ ಸಂಚಾಲಕ ರಾಧಾಕೃಷ್ಣ ನಾಯಕ್, ಕೋಶಾಧಿಕಾರಿ ಬಾಬು ಕೊಪ್ಪಳ, ಸದಸ್ಯರಾದ ರವಿಪ್ರಕಾಶ್, ನಿತ್ಯಾನಂದ ನಾಯಕ್, ಸದಾಶಿವ ಬನ, ಐಟಿಐ ಪ್ರಿನ್ಸಿಪಾಲ್ ರಮೇಶ್ ರೈ, ನಾರಾಯಣ ನಾಯಕ್ ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.





