ವಿಟ್ಲ: ಕಂಬಳಬೆಟ್ಟು ಜನಪ್ರಿಯ ಸೆಂಟ್ರಲ್ ಸ್ಕೂಲ್ ನಲ್ಲಿ ಶಾಲಾ ವಾರ್ಷಿಕೋತ್ಸವ ನಭಾ 2025-26: ಗ್ರಾಮೀಣ ಭಾಗದಲ್ಲಿ ಡಾ. ಅಬ್ದುಲ್ ಬಶೀರ್ ಅವರ ಶಿಕ್ಷಣ ಕ್ಷೇತ್ರದ ಸೇವೆ ಶ್ಲಾಘನೀಯ: ಶಾಹೀನ್ ಡಾ. ಅಬ್ದುಲ್ ಖಾದೀರ್
ವಿಟ್ಲ: ಕಂಬಳಬೆಟ್ಟು ಜನಪ್ರಿಯ ಸೆಂಟ್ರಲ್ ಸ್ಕೂಲ್ ನಲ್ಲಿ ಶಾಲಾ ವಾರ್ಷಿಕೋತ್ಸವ ನಭಾ 2025-26 ಶನಿವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೀದರ್ ಶಾಹೀನ್ ಶಿಕ್ಷಣ ಸಂಸ್ಥೆಯ ಚೇಯರ್ಮ್ಯಾನ್ ಅಬ್ದುಲ್ ಖಾದೀರ್ ಅವರು
ಮಕ್ಕಳಲ್ಲಿ ಶಿಸ್ತು ಅಗತ್ಯವಾಗಿದೆ. ಬುದ್ದಿವಂತ ಮಕ್ಕಳು ನಮ್ಮ ಊರಿಗೆ ಬೇಕು. ಅಂತಹ ಶಿಕ್ಷಣ ಜನಪ್ರಿಯ ಸಂಸ್ಥೆ ನೀಡುತ್ತಿದೆ. ದೇವರು ಕೊಟ್ಟ ಸಂಪತ್ತು ಅನ್ನು ಉತ್ತಮ ಸಮಾಜಕ್ಕಾಗಿ ವಿನಿಯೋಗಿಸುವ ಕಾರ್ಯವನ್ನು ಅಬ್ದುಲ್ ಬಶೀರ್ ಮಾಡುತ್ತಿದ್ದಾರೆ. ಇಂತಹ ಒಂದು ಗ್ರಾಮೀಣ ಭಾಗದಲ್ಲಿ ಇಷ್ಟೊಂದು ದೊಡ್ಡ ಸಂಸ್ಥೆ ನಿರ್ಮಿಸಿರುವ ಬಶೀರ್ ಕಾರ್ಯ ಶ್ಲಾಘನೀಯ. ಜನಪ್ರಿಯ ಸಂಸ್ಥೆ ಟ್ಯೂಷನ್ ಮುಕ್ತ ಸಂಸ್ಥೆಯಾಗಿದೆ. ಇಲ್ಲಿ ಕಲಿಯುವ ವಿದ್ಯಾರ್ಥಿಗಳು ಟ್ಯೂಷನ್ ಪಡೆಯುತ್ತಿಲ್ಲ. ಎಂಬುದು ಸಂತೋಷದ ವಿಚಾರವಾಗಿದೆ. ಎಲ್ಲ ಧರ್ಮದ ಮಕ್ಕಳು ಒಗ್ಗಟ್ಟಾಗಿ ಎಲ್ಲರೊಂದಿಗೆ ಬೆರೆತಾಗ ದೇಶದ ಸೌಹಾರ್ದ ಗಟ್ಟಿಯಾಗುತ್ತದೆ. ಗ್ರಾಮೀಣ ಭಾಗವಾದ ಕಂಬಳಬೆಟ್ಟು ಪ್ರದೇಶ ಜನಪ್ರಿಯ ಸಂಸ್ಥೆಯ ಮೂಲಕ ಇಡೀ ದೇಶಕ್ಕೆ ಪರಿಪರಿಚಿತವಾಗಲಿ ಎಂದು ಶುಭ ಹಾರೈಸಿದರು.
ಜನಪ್ರಿಯ ಫೌಂಡೇಶನ್ ಅಧ್ಯಕ್ಷ ಡಾ. ಅಬ್ದುಲ್ ಬಶೀರ್ ವಿ ಕೆ ಮಾತನಾಡಿ ಮುಂದಿನ ವರ್ಷ ನಮ್ಮ ವಿದ್ಯಾ ಸಂಸ್ಥೆಯಲ್ಲಿ 10ನೇ ತರಗತಿ ಪ್ರಾರಂಭಗೊಳ್ಳಲಿದೆ. ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆ ಎಲ್ಲರ ಸಹಕಾರದಲ್ಲಿ ಯಶಸ್ವಿಯಾಗಿದೆ. ಮಕ್ಕಳಿಗೆ ಹೆತ್ತವರು ಕೊಡುವ ಉಡುಗೊರೆ ಶಿಕ್ಷಣವಾಗಿದೆ. ಶಿಕ್ಷಣವನ್ನು ಕಿತ್ತುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಅದು ಮಹತ್ವದ ಘಟ್ಟವಾಗಿದೆ. ಇಲ್ಲಿ ಮಕ್ಕಳಿಗೆ ಶಿಕ್ಷಣ ಮಾತ್ರವಲ್ಲ ಸಂಸ್ಕಾರಯುತ ಶಿಕ್ಷಣ ಮತ್ತು ಪ್ರತಿಭೆಗಳನ್ನು ಪ್ರದರ್ಶಿಸಲು ಅವಕಾಶ ಮಾಡಿ ಕೊಡಲಾಗುತ್ತದೆ ಎಂದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆವಾರ್ಡ್ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಜನಪ್ರಿಯ ಫೌಂಡೇಶನ್ ಅಧ್ಯಕ್ಷೆ ಫಾತಿಮಾ ನಸ್ರೀನಾ ಬಶೀರ್, ನಿರ್ದೇಶಕ ಡಾ. ಶಾರೂಖ್ ಅಬಅಬ್ದುಲ್ಲ, ಜನಪ್ರಿಯ ಸೆಂಟ್ರಲ್ ಸ್ಕೂಲ್ ನ ನಿರ್ದೇಶನ ಎ ಆರ್ ನೌಶೀನ್ ಬದ್ರಿಯಾ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ.ಎಸ್ ಮಹಮ್ಮದ್ ಮೊದಲಾದವರು ಉಪಸ್ಥಿತರಿದ್ದರು. ಪ್ರಾಂಶುಪಾಲ ಲಿಬಿನ್ ಝೇವಿಯರ್ ವರದಿ ಮಂಡಿಸಿದರು. ಆಡಳಿತಾಧಿಕಾರಿ ಸಫ್ವಾನ್ ಪಿಲಿಕಲ್ ಸ್ವಾಗತಿಸಿದರು.




