ಮಂಗಳೂರು: ಚಿನ್ನದ ವ್ಯಾಪಾರಿಗೆ ವಂಚಿಸಿದ ಪ್ರಕರಣ: ಅಂತರ್ ರಾಜ್ಯ ವಂಚಕನ ಬಂಧನ
ಮಂಗಳೂರು: ನಗರದ ಚಿನ್ನದ ವ್ಯಾಪಾರಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರ್ ರಾಜ್ಯ ವಂಚಕನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ನಗರದ ಉರ್ವಾಸ್ಟೋರ್, ಚಿಲಿಂಬಿ, ಗುಜ್ಜಾಡಿ ಚೆಂಬರ್ಸ್ ನಲ್ಲಿರುವ ಸ್ವರ್ಣ ಜುವೆಲರ್ಸ್ ಅಂಗಡಿಗೆ ಬಂದು ಅರುಣ್ ಎಂದು ಪರಿಚಯ ಮಾಡಿಕೊಂಡಿದ್ದ ವ್ಯಕ್ತಿಯು, ನವೆಂಬರ್ 22 ರಂದು ಬಿಜೈ ಕಾಫಿಕಾಡ್ ನಲ್ಲಿರುವ ಅಜಂತ್ ಬಿಸಿನೆಸ್ ಸೆಂಟರ್ ನಲ್ಲಿ ತಾನು ಆಫೀಸ್ ತೆರೆಯಲ್ಲಿದ್ದು ,ಅಲ್ಲಿಗೆ ಬರುವ ಗೆಸ್ಟ್ ಗಳಿಗೆ ಚಿನ್ನದ ಬಿಸ್ಕೆಟ್ ನೀಡಲು ಇದೆ ಆ ಕಾರಣ 10 ಗ್ರಾಂ ತೂಕದ 24 ಚಿನ್ನದ ಬಿಸ್ಕಿಟ್ ಗಳು ಬೇಕು ಎಂದು ಬಿಸ್ಕಿಟ್ ಗಳ ಡಿಸೈಜ್ ಸೆಲೆಕ್ಟ್ ಮಾಡಿ ನವೆಂಬರ್ 22 ರಂದು ಮಧ್ಯಾಹ್ನ 12-00 ಗಂಟೆಗೆ ಬಿಜೈ ಕಾಫಿಕಾಡ್ ನಲ್ಲಿರುವ ಅಜಂತ್ ಬಿಸಿನೆಸ್ ಸೆಂಟರ್ ನಲ್ಲಿರುವ ತನ್ನ ಆಫಿಸ್ ತಂದುಕೊಡಲು ತಿಳಿಸಿ ಚಿನ್ನ ದೊರೆತ ಕೂಡಲೇ ಚಿನ್ನದ ಹಣವನ್ನು RTGS ಮಾಡುತ್ತೇನೆಂದು ನಂಬಿಸಿದ್ದಾನೆ.
ನವೆಂಬರ್ 22 ರಂದು ಸ್ವರ್ಣ ಜ್ಯುವೆಲರ್ಸ್ ಸಿಬ್ಬಂದಿ ಚಿನ್ನದ ಬಿಸ್ಕಿಟ್ ಗಳನ್ನು ಕೊಡಲು ಹೋದ ಸಮಯ ಆರೋಪಿಯು ಅಜಂತ ಬಿಸಿನೆಸ್ ಸೆಂಟರ್ ನ 5 ನೇ ಮಹಡಿಯಲ್ಲಿರುವ ಕೆಫೆಟೆರಿಯಾಕ್ಕೆ ಕರೆದುಕೊಂಡು ಹೋಗಿ ಅಲ್ಲಿ ತಲಾ 10 ಗ್ರಾಂ ತೂಕದ 24 ಕ್ಯಾರೇಟ್ 24 ಚಿನ್ನದ ಬಿಸ್ಕಿಟ್ ಗಳನ್ನು ಪಡೆದುಕೊಂಡು ತಾನು 3 ನೇ ಮಹಡಿಯಲ್ಲಿರುವ ಆಫೀಸ್ ನಲ್ಲಿ RTGS ಮಾಡುತ್ತೇನೆಂದು ತಿಳಿಸಿ ಹಣ ಪಾವತಿ ಮಾಡದೇ ವಂಚಿಸಿ ಪರಾರಿಯಾಗಿರುತ್ತಾನೆ. ಸುಮಾರು ರೂ 31,00,000 ಮೌಲ್ಯದ ಚಿನ್ನವನ್ನು ಪಡೆದು ವಂಚಿಸಿದ ಬಗ್ಗೆ ಸ್ವರ್ಣ ಜ್ಯೂವೆಲರ್ಸ್ ಮಾಲಕರಾದ ಅಜಯ್ ರಾಮದಾಸ ನಾಯಕ್ ರವರು ನೀಡಿದಂತೆ ಉರ್ವ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿರುತ್ತದೆ.





