ಕೇರಳ ಮೂಲದ ಮಹಿಳೆ ದುಬೈನಲ್ಲಿ ಸಾವು
ದುಬೈ : ಕೇರಳ ಮೂಲದ ಮಹಿಳೆಯೊಬ್ಬಳು ದುಬೈನಲ್ಲಿ ಸಾವನ್ನಪ್ಪಿದ್ದು ಆಕೆಯ ಪೀಡನೆಯ ವಿಡಿಯೋ ನೋಡಿದ ಕಂಪೆನಿ ಆಕೆಯ ಪತಿಯನ್ನು ಕೆಲಸದಿಂದ ತೆಗೆದು ಹಾಕಿದ ವಿದ್ಯಮಾನ ನಡೆದಿದೆ.
ಕೇರಳ ಮೂಲದ ಮಹಿಳೆ ಅತುಲ್ಯ ಶೇಖರ್ ಶನಿವಾರ ಮೃತಪಟ್ಟಿದ್ದರು. ಅತುಲ್ಯ ಶೇಖರ್ ಮೃತಪಟ್ಟ ನಂತರ ಸೋಮವಾರ ಆಕೆಯ ಪತಿಯನ್ನು ಕಂಪೆನಿ ಕೆಲಸದಿಂದ ವಜಾ ಮಾಡಿದೆ. ನಿರ್ಮಾಣ ಕಂಪನಿಯ ಹಿರಿಯ ಮಾನವ ಸಂಪನ್ಮೂಲ (HR) ವ್ಯವಸ್ಥಾಪಕರು, ಕಂಪನಿಯಲ್ಲಿ ಸೈಟ್ ಇಂಜಿನಿಯರ್ ಆಗಿದ್ದ ಸತೀಶ್ ಶಿವಶಂಕರ ಪಿಳ್ಳೈ ಅವರು ಪತ್ನಿ ಅತುಲ್ಯ ಶೇಖರ್ ಅವರ ಸಾವಿನ ನಂತರ ಕೆಲಸವನ್ನು ಕಳಕೊಂಡಿದ್ದಾರೆ.





