ಪುತ್ತೂರಿನ ದರ್ಬೆ ಕ್ಲಿನಿಕ್ ಸಿಬ್ಬಂದಿಗೆ ಹಲ್ಲೆ: ದೂರು ದಾಖಲು
ಪುತ್ತೂರಿನ ದರ್ಬೆ ಎಂಬಲ್ಲಿ ಈ ಘಟನೆ ನಡೆದಿದ್ದು , ಡಾ.ರಾಮ್‌ಮೋಹನ್ ಎಂಬವರಿಗೆ ಸೇರಿದ ಕ್ಲಿನಿಕ್ ಇದಾಗಿದೆ ಎಂದು ತಿಳಿದು ಬಂದಿದೆ. ದಿನವಡೀ ರೋಗಿಗಳಿಂದ ತುಂಬಿರುವ ಈ ಕ್ಲಿನಿಕ್ ನಲ್ಲಿ 6 ಗಂಟೆಯಿಂದಲೇ ಟೋಕನ್ ನೀಡುವ ವ್ಯವಸ್ಥೆ ಇರುತ್ತದೆ.
ಕ್ಲಿನಿಕ್ ಮುಂಭಾಗದ ರಸ್ತೆಯ ಪಾರ್ಕಿಂಗ್ ಶುಲ್ಕ ಸಂಗ್ರಹಿಸುವ ಇಬ್ರಾಹಿಂ ಎಂಬ ವ್ಯಕ್ತಿ, ಪರಿಚಯದವರಿಗೆ ಬೇಗ ಹೋಗುವ ಟೋಕನ್ ನೀಡದಿರುವುದಕ್ಕೆ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.
ಕ್ಲಿನಿಕ್ ಸಿಬ್ಬಂದಿ ಶ್ರೀಕಾಂತ್ ಎಂಬವರ ಮೇಲೆ ಹಲ್ಲೆ ನಡೆಸಿ, ಕ್ಲಿನಿಕ್ ನ ಪೀಠೋಪಕರಣ ಹಾನಿಮಾಡಿದ್ದಾನೆ, ಘಟನಾ ಸ್ಥಳಕ್ಕೆ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಭೇಟಿ ನೀಡಿದ್ದಾರೆ.ಈ ಬಗ್ಗೆ ಪುತ್ತೂರು ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ





