ನಾಳೆ ನ.30ರಂದು ಕುಡ್ತಮುಗೇರು TOP ಆ್ಯಂಡ್ TOP ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೂತನ ಆಂಬುಲೆನ್ಸ್ ಉದ್ಘಾಟನಾ ಸಮಾರಂಭ: ಭಾವೈಕ್ಯತಾ ವಿಚಾರಗೋಷ್ಠಿ ಹಾಗೂ ಆರೋಗ್ಯ ತಪಾಸಣಾ ಶಿಬಿರ
ವಿಟ್ಲ: ಕುಡ್ತಮುಗೇರು TOP ಆ್ಯಂಡ್ TOP ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೂತನ ಆಂಬುಲೆನ್ಸ್ ಉದ್ಘಾಟನಾ ಸಮಾರಂಭ, ಭಾವೈಕ್ಯತಾ ವಿಚಾರಗೋಷ್ಠಿ ಹಾಗೂ ಬೃಹತ್ ರಕ್ತದಾನ ಶಿಬಿರ, ವೈದ್ಯಾಕೀಯ ತಪಾಸಣಾ ಶಿಬಿರ ನ.30 ಭಾನುವಾರ ಸಾಲೆತ್ತೂರು ಜಂಕ್ಷನ್ ನಲ್ಲಿ ನಡೆಯಲಿದೆ.

TOP AND TOP ಇದರ ಗೌರವಾಧ್ಯಕ್ಷ ಶಶಿಭಟ್ ಪಡಾರು ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀ ವಸಂತನಾಥ ಗುರೂಜಿ, ನಿವೃತ್ತ ಪ್ರಾಂಶುಪಾಲ ಝೇವಿಯರ್ ಡಿ ಸೋಜ, ಡಾ. ಎಂ ಎಸ್ ಎಂ ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ, ಇಕ್ಬಾಲ್ ಬಾಳಿಲ, TOP AND TOP ಇದರ ಅಧ್ಯಕ್ಷ ಹಕೀಮ್ ಪರ್ತಿಪ್ಪಾಡಿ, ಉಪಾಧ್ಯಕ್ಷ ಪವಿತ್ರ ಪೂಂಜ, ಪ್ರಧಾನ ಕಾರ್ಯದರ್ಶಿ ಸಿ.ಎಚ್ ಅಬೂಬಕ್ಕರ್, ದಾಮೋದರ ಕುಲಾಲ್, ವತ್ಸ ಪ್ರವೀಣ್ ಮೊದಲಾದವರು ಭಾಗವಹಿಸಲಿದ್ದಾರೆ.




