ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಮೃತದೇಹ ಪತ್ತೆ
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬುರಡುಗುಂಟೆ ಗ್ರಾಮದ ಅಂಜನಪ್ಪ ಹಾಗೂ ಮಧುಶ್ರೀ ದಂಪತಿ ಪುತ್ರಿಗೆ ತೀವ್ರ ಹೊಟ್ಟೆನೋವು ಕಾಡುತ್ತಿದ್ದು, ಆಸ್ಪತ್ರೆಗೆ ದಾಖಲಿಸಿದರೂ ಕಡಿಮೆ ಆಗಿರಲಿಲ್ಲ.
ಇದಕ್ಕೆಲ್ಲಾ ಶಾರದಾ ಕಳೆದ 4 ವರ್ಷಗಳ ಹಿಂದೆ ಬಿದ್ದಿದ್ದ ಬುರುಡುಗುಂಟೆ ಗ್ರಾಮದ ಬಳಿ ಇರುವ ಸ್ಮಶಾನದ ಸಮೀಪದ ಮೂರು ದಾರಿಗಳು ಸಂಗಮಿಸುವ ಜಾಗದ ಮೂಲಕ ಬಂದಿದ್ದು, ಅಲ್ಲಿಂದ ಬಂದ ಈಕೆ ಚಿತ್ರವಿಚಿತ್ರವಾಗಿ ದೆವ್ವ ಮೆಟ್ಟಿದಂತೆ ವರ್ತಿಸುತ್ತಿದ್ದಳು. ಬಳಿಕ ಇದರಿಂದಲೇ ಸಾವಾಗಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ಮನೆಯಲ್ಲಿ ಒಬ್ಬಳೇ ಇದ್ದ ಶಾರದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ನಂದಿಗಿರಿಧಾಮ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.





