ದಾವಣಗೆರೆ: ನಗರದ ಕುಂದುವಾಡ ಕೆರೆಯಲ್ಲಿ ಇಬ್ಬರು ಯುವಕರ ಶವ ಅನುಮಾನಾಸ್ಪದವಾಗಿ ಪತ್ತೆಯಾಗಿದೆ.
ಶಾಂತಿನಗರದ ಚೇತನ್ (22), ಮನು (23) ಮೃತ ದುರ್ದೈವಿಗಳು. ಇಬ್ಬರು ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದರು. ಇಂದು (ನ.25) ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಇಬ್ಬರ ಶವಗಳು ಕೆರೆಯಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾಗಿವೆ.