ವಿದ್ಯಾರ್ಥಿನಿಯ ಹತ್ಯೆ: ಆರೋಪಿಯ ಬಂಧನ
ನೆಲಮಂಗಲ: ಸ್ನೇಹಿತೆ ರೂಂಗೆ ಕರೆದೊಯ್ದು ವಿದ್ಯಾರ್ಥಿನಿ ದೇವಿಶ್ರೀ ಹತ್ಯೆ ಮಾಡಿದ ಪ್ರಕರಣ ಸಂಬಂಧ ಕೊಲೆ ಆರೋಪಿಯನ್ನು ಮಾದನಾಕನಹಳ್ಳಿ ಪೊಲೀಸರು ತಿರುಪತಿಯಲ್ಲಿ ಬಂಧಿಸಿದ್ದಾರೆ.
ದೇವಿಶ್ರೀ ಹಾಗೂ ಪ್ರೇಮ್‌ವರ್ಧನ್ ಇಬ್ಬರೂ ಪ್ರೇಮಿಗಳು. ಇವರಿಬ್ಬರೂ ಆಂಧ್ರ ಮೂಲದವರಾಗಿದ್ದು, ದ್ವಿತೀಯ ಪಿಯುಸಿವರೆಗೂ ಒಂದೇ ಕಾಲೇಜಿನಲ್ಲಿ ಓದಿದ್ದರು. ಬಳಿಕ ದೇವಿಶ್ರೀ ಬಿಬಿಎಂ ಮಾಡಲು ಬೆಂಗಳೂರಿಗೆ ಬಂದಿದ್ದಳು. ಈ ವೇಳೆ ಪ್ರೇಮ್‌ವರ್ಧನ್ ಆಗಾಗ ಬೆಂಗಳೂರಿಗೆ ಬರುತ್ತಿದ್ದ. ಬೆಂಗಳೂರಿಗೆ ಬಂದಾಗಿನಿಂದ ದೇವಿಶ್ರೀಗೆ ಬೇರೊಂದು ಹುಡುಗನ ಜೊತೆ ಸ್ನೇಹ ಬೆಳೆದಿತ್ತು.




