May 3, 2026

ಬೈಕ್ ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ: ಯುವತಿ ಸಾವು, ಯುವಕನಿಗೆ ಗಾಯ

0
image_editor_output_image790894446-1763726419499.jpg

ದಾವಣಗೆರೆ : ವಾಹನ ಚಲಾಯಿಸುವಾಗ ಎಷ್ಟು ಜಾಗೃತೆ ವಹಿಸಿದರೂ ಸಾಲದು. ಆದರೆ, ಇಲ್ಲಿ ಬೈಕ್ ನಲ್ಲಿ ಹೋಗ್ತಾ ಇದ್ದವರು ಜಗಳವಾಡಿದ್ದಾರೆ. ಆ ಜಗಳದಿಂದ ಒಂದು ಜೀವವೇ ಹೋಗಿದೆ. ಈ ಘಟನೆ ನಡೆದಿರೋದು ದಾವಣಗೆರೆಯ ಹೊರ ವಲಯದ ಮಿಟ್ಲಕಟ್ಟೆ ಗ್ರಾಮದಲ್ಲಿ ನಡೆದಿದೆ.

21 ವರ್ಷದ ಪ್ರಿಯಾ ಮೃತ ಯುವತಿ. ಯೋಗೇಶ್‌ ಘಟನೆಯಲ್ಲಿ ಗಾಯಗೊಂಡ ಯುವಕ. ಇಬ್ಬರು ದಾವಣಗೆರೆ ನಿವಾಸಿಗಳಾಗಿದ್ದು, ಕಾಲೇಜು ಮುಗಿಸಿ ಡಾಬಾವೊಂದಕ್ಕೆ ಸ್ನೇಹಿತರ ಜೊತೆ ಊಟಕ್ಕೆ ಹೋಗಿದ್ದರು. ಈ ವೇಳೆ ಪ್ರಿಯಾ ಹಾಗೂ ಯೋಗೇಶ್ ನಡುವೆ ಡಾಬಾದಲ್ಲೇ ಗಲಾಟೆ ನಡೆದಿದೆ.

ಜಗಳವಾಡಿ ಪ್ರಿಯಾ ಆಕೆಯ ಸ್ನೇಹಿತೆಯೊಂದಿಗೆ ಸ್ಕೂಟಿಯಲ್ಲಿ ಹೋಗುತ್ತಿದ್ದಳು. ಈ ವೇಳೆ, ಬುಲೆಟ್ ಬೈಕ್‌ ನಲ್ಲಿ ಯುವತಿಯರನ್ನು ಹಿಂಬಾಲಿಸಿದ ಯೋಗೇಶ್, ನಡು ರಸ್ತೆಯಲ್ಲಿ ನಿಲ್ಲಿಸಿ ಪ್ರಿಯಾಳನ್ನು ತನ್ನ ಬೈಕ್‌ನಲ್ಲಿ ಕೂರಿಸಿಕೊಂಡು ಬಂದಿದ್ದ. ಆಗಲೂ ಜಗಳ ಮುಂದುವರಿದಿದ್ದು, ಬೈಕ್ ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಡಿಕ್ಕಿಯಾಗಿದೆ.

ಪರಿಣಾಮ ಪ್ರಿಯಾ ಸಾವನ್ನಪ್ಪಿದ್ದು, ಯೋಗೇಶ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸದ್ಯ ಈ ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!