ದಾರುನ್ನಜಾತ್ ಮಾಸಿಕ ಸ್ವಲಾತ್ & ರಿಫಾಯಿ ಅನುಸ್ಮರಣೆ
ವಿಟ್ಲ: ದಾರುನ್ನಜಾತ್ ಎಜುಕೇಶನಲ್ ಸೆಂಟರ್ ಟಿಪ್ಪು ನಗರ ಸಂಸ್ಥೆಯಲ್ಲಿ ಮಾಸಿಕ ಸ್ವಲಾತ್ ಮತ್ತು ರಿಫಾಯಿ ಅನುಸ್ಮರಣೆ ಹಾಗೂ ಇತ್ತೀಚೆಗೆ ನಮ್ಮಿಂದ ಅಗಲಿದ ಸಮಸ್ತ ಮುಷಾವರ ಸದಸ್ಯರಾದ ಕಟ್ಟಿಪಾರ ಉಸ್ತಾದ್ ಮತ್ತು ಸಂಸ್ಥೆಯ ಹಿತೈಷಿಗಳಾದ ಇಸ್ಮಾಯಿಲ್ ಅಳಿಕೆ, ಹಸೈನಾರ್ ಉಸ್ತಾದ್ ರಾದುಕಟ್ಟೆ, ಮನ್ಸೂರ್ ಮರಿಕಳ, ಹಮೀದ್ ಸೆರ್ಕಳ, ಉಮ್ಮಲಿಮ್ಮ, ಅಜುಮ್ಮ ಚನಿಲ, ಐಸಮ್ಮ ಮಂಜೇಶ್ವರ, ಅಲಿಮಮ್ಮ ಆಜುಮ್ಮ ವಿಟ್ಲ, ಇಬ್ರಾಹಿಂ ಹಾಜಿ ಕಡಂಬು ಇವರುಗಳ ಹೆಸರಿನಲ್ಲಿ ತಹ್ಲೀಲ್ ಮಜ್ಲಿಸ್ ನಡೆಸಿ ಪ್ರಾರ್ಥನೆ ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಬಹು ಮಹಮೂದುಲ್ ಫೈಝಿ ವಾಲೆಮುಂಡೋವು ಉಸ್ತಾದ್ ನಿರ್ವಹಿಸಿ ಉದ್ಘಾಟಿಸಿದರು. ವಿಷಯ ಮಂಡನೆ ನಡೆಸಿದ ಬಹು ಹಾಫಿಳ್ ಶರೀಫ್ ಸಖಾಫಿ ಮುದರ್ರಿಸ್ ಉಕ್ಕುಡ ಮಾತನಾಡಿ ಪೂರ್ವಿಕರಾದ ಮಹಾನುಭಾವರು ತೋರಿಸಿಕೊಟ್ಟ ಆದರ್ಶವನ್ನು ಮೈಗೂಡಿಸಿ ಮುಂದೆ ಬಂದರೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಅವರು ಇಸ್ಲಾಮಿನ ಪರಂಪರೆಯನ್ನು ಪ್ರಚಾರ ಮಾಡುವುದಕ್ಕೆ ಮಾಡಿದ ತ್ಯಾಗಗಳು ಯಾವತ್ತೂ ಮುಸ್ಲಿಂ ಸಮುದಾಯಕ್ಕೆ ಮರೆಯಲು ಸಾಧ್ಯವಿಲ್ಲ ಆದುದರಿಂದ ಇವತ್ತು ಕೂಡ ಎಲ್ಲಾ ಸ್ಥಳಗಳಲ್ಲಿ ರಿಫಾಯಿ ಅನುಸ್ಮರಣೆ ನಡೆಯುತ್ತಾ ಇದೆ ಎಂದು ನುಡಿದರು.
ಪ್ರಾರ್ಥನೆಗೆ ಸಯ್ಯದ್ ಶಮೀಮ್ ತಂಙಳ್ ಟಿಪ್ಪು ನಗರ ನೇತೃತ್ವ ನೀಡಿದರು. ಈ ಸಂದರ್ಭದಲ್ಲಿ ಸಅದಿ ಬಿರುದು ಪಡೆದ ಕಲಂದರ್ ಸಅದಿ ಟಿಪ್ಪು ನಗರ ಇವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು ಮತ್ತು ಶೈಖುನಾ ಬೆಳ್ಳಿ ಪಾಡಿ ಉಸ್ತಾದ್ ಅವರ ಸ್ಮರಣೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಎಸ್ ಎಂ ಎ ಸದಸ್ಯರಾದ ಅಬ್ದುಲ್ ಹಕೀಮ್ ಕಂಬಳಬೆಟ್ಟು, ಖದ್ಮತ್ ಫೌಂಡೇಶನ್ ಕೋಶಾಧಿಕಾರಿ ಶರೀಫ್ ಉಕ್ಕುಡ, ಇಬ್ರಾಹಿಂ ಮುಸ್ಲಿಯರ್ ದುಬೈ, ಸುನ್ನಿ ಮುಖಂಡರಾದ ಹಾರಿಸ್ ಒಕ್ಕೆತ್ತೂರು, KMJ ಟಿಪ್ಪು ನಗರ ಅಧ್ಯಕ್ಷರಾದ ಇಬ್ರಾಹಿಂ ಮೋನು, ಯುನುಸ್ ಸಅದಿ ಟಿಪ್ಪುನಗರ, ಅಬ್ದುಲ್ ರಹಮಾನ್ ಹಾಜಿ ಕೊಡಂಗಾಯಿ, ಉಮ್ಮರ್ ಮುಸ್ಲಿಯರ್ ಚನಿಲ, SYS ಪ್ರಧಾನ ಕಾರ್ಯದರ್ಶಿ ಶಾಫಿ ಇಂಜಿನಿಯರ್ ಇನ್ನಿತರ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು. ಸಂಸ್ಥೆಯ ಮ್ಯಾನೇಜರ್ ಅಬ್ದುಲ್ ಹಮೀದ್ ಹಾಜಿ ಸ್ವಾಗತಿಸಿ ವಂದಿಸಿದರು.




