March 18, 2026

ಬೇಟೆಯಾಡಲು ಹೋಗಿದ್ದಾಗ ನಾಡಬಂದೂಕಿನಿಂದ ಮಿಸ್ ಫೈರ್: ಗುಂಡು ತಗುಲಿದ ವ್ಯಕ್ತಿ ಸಾವು

0
image_editor_output_image-316857010-1763723056759.jpg

ರಾಮನಗರ : ಬೇಟೆಯಾಡಲು ಹೋಗಿದ್ದಾಗ ನಾಡಬಂದೂಕಿನಿಂದ ಮಿಸ್ ಫೈರ್ ಆಗಿ ಕಾಲಿಗೆ ಗುಂಡು ತಗುಲಿದ ಪರಿಣಾಮ ವ್ಯಕ್ತಿ ಸಾವನ್ನಪ್ಪಿದ ಘಟನೆ ಶುಕ್ರವಾರ (ನ.21)ಬೆಳಗ್ಗೆ ಮಾಗಡಿ ತಾಲೂಕಿನ ಕೆಬ್ಬೆಪಾಳ್ಯ ಗ್ರಾಮದ ಬಳಿ ನಡೆದಿದೆ. ಪಾಂಡುರಂಗ(35) ಮೃತಪಟ್ಟವರು.

ಪಾಂಡುರಂಗ ತನ್ನ ಸ್ನೇಹಿತ ಕಿರಣ್ ಜೊತೆ ಬೆಳಗಿನ ಜಾವ ಜಮೀನಿನಲ್ಲಿ ಕಾಡುಪ್ರಾಣಿ ಬೇಟೆಯಾಡಲು ತೆರಳಿದ್ದರು. ಆ ಸಂದರ್ಭ ಮಿಸ್ ಫೈರ್ ಆಗಿ ಕಾಲಿಗೆ ಗುಂಡು ತಗುಲಿದ್ದು, ತೀವ್ರ ರಕ್ತಸ್ರಾವ ಆಗಿದ್ದರಿಂದ ಪಾಂಡುರಂಗ ಮೃತಪಟ್ಟಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!