ಶಾಲಾ ಶಿಕ್ಷಕನ ಕಿರುಕುಳಕ್ಕೆ ಬೇಸತ್ತು 10ನೇ ತರಗತಿಯ ವಿದ್ಯಾರ್ಥಿ ಆತ್ಮಹತ್ಯೆ
ನವದೆಹಲಿ: ಶಾಲಾ ಶಿಕ್ಷಕನ ಕಿರುಕುಳಕ್ಕೆ ಬೇಸತ್ತು 10ನೇ ತರಗತಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
16 ವರ್ಷದ ಶೌರ್ಯ ಪಾಟೀಲ್ ಆತ್ಮಹತ್ಯೆಗೆ ಶರಣಾದ ಬಾಲಕ. ಶಾಲಾ ಶಿಕ್ಷಕರೊಬ್ಬರು ಈತನನ್ನು ಅಪಹಾಸ್ಯ ಮಾಡುತ್ತಿದ್ದರು. ಅಸಭ್ಯವಾಗಿ ನಡೆಸಿಕೊಂಡರೆಂಬ ಆರೋಪ ಕೇಳಿಬಂದಿದೆ. ಶಾಲಾ ಶಿಕ್ಷಕನ ವಿರುದ್ಧ ಬಾಲಕನ ತಂದೆ ಪ್ರದೀಪ್ ಪಾಟೀಲ್ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಸೆಂಟ್ರಲ್ ದೆಹಲಿಯ ರಾಜೇಂದ್ರ ಪ್ಲೇಸ್ ಮೆಟ್ರೋ ನಿಲ್ದಾಣದ ಪ್ಲಾಟ್‌ಫಾರ್ಮ್ 2ರಲ್ಲಿ ಟ್ರ್ಯಾಕ್‌ಗೆ ಜಿಗಿದು ಸೇಂಟ್ ಕೊಲಂಬಾ ಶಾಲೆಯ ಶೌರ್ಯ ಆತ್ಮಹತ್ಯೆ ಮಾಡಿಕೊಂಡಿದ್ದ. ಆತನ ಶಾಲಾ ಬ್ಯಾಗ್‌ನಿಂದ ಡೆತ್‌ನೋಟ್ ವಶಕ್ಕೆ ಪಡೆಯಲಾಗಿದ್ದು, ತನ್ನ ಕೃತ್ಯಕ್ಕೆ ಮೂವರು ಶಿಕ್ಷಕರು ಕಾರಣ ಎಂದು ವಿದ್ಯಾರ್ಥಿ ದೂಷಿಸಿದ್ದಾನೆ.




