ಕಣ್ಣೂರು: ನಿರ್ಮಾಣ ಹಂತದ ಪ್ಲೈಓವರ್ ನಲ್ಲಿ ಸಿಕ್ಕಿಹಾಕಿಕೊಂಡ ಕಾರು
ಕಣ್ಣೂರು: ನಿರ್ಮಾಣ ಹಂತದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಬೈಪಾಸ್‌ನ ಫ್ಲೈಓವರ್ ಮತ್ತು ಅಂಡರ್‌ಪಾಸ್ ನಡುವೆ ವೇಗವಾಗಿ ಬಂದ ಕಾರೊಂದು ಸಿಲುಕಿಕೊಂಡ ಘಟನೆ ಕಣ್ಣೂರಿನ ಚಾಲಾ ಬೈಪಾಸ್ ಬಳಿ ನಡೆದಿದೆ.
ನಿನ್ನೆ ಸಂಜೆ 5.30 ಕ್ಕೆ ಬೈಪಾಸ್‌ನ ಚಾಲಾ ಅಂಬಲಮ್ ನಿಲ್ದಾಣದಲ್ಲಿರುವ ಅಂಡರ್‌ಪಾಸ್‌ನಲ್ಲಿ ಈ ಘಟನೆ ನಡೆದಿದೆ.
ಕಾರಿನ ಚಾಲಕ ಕುಡಿದ ಮತ್ತಿನಲ್ಲಿ ನಿರ್ಮಾಣ ಹಂತದ ಪ್ಲೈಓವರ್ ಮೇಲೆ ಕಾರು ಚಲಾಯಿಸಿದ್ದಾನೆ. ಈ ವೇಳೆ ಅಂಡರ್ ಪಾಸ್ ಮತ್ತು ಪ್ಲೈಓವರ್ ನಡುವೆ ಇದ್ದ ಜಾಗದಲ್ಲಿ ಕಾರು ತಲೆಕೆಳಗಾಗಿ ಸಿಲುಕಿಕೊಂಡಿದೆ. ಸ್ಥಳೀಯರು ಅಂಡರ್‌ಪಾಸ್ ರಸ್ತೆಯ ಮೇಲೆ ನೇತಾಡುತ್ತಿದ್ದ ಕಾರಿನಿಂದ ಚಾಲಕನನ್ನು ಹೊರತೆಗೆದರು. ನಂತರ ಕ್ರೇನ್ ಬಳಸಿ ಕಾರನ್ನು ಮೇಲಕ್ಕೆತ್ತಲಾಗಿದೆ. ಕಾರಿನ ಚಾಲಕ ಮಲಪ್ಪುರಂನ ಕೊಂಡೋಟ್ಟಿ ಮೂಲದ ಲಸಿಮ್ (29) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.





