ಕಡಬ: ಮಹಿಳೆಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಆರೋಪಿಯ ಬಂಧನ
ಪುತ್ತೂರು: ಮನೆಯ ಕೊಟ್ಟಿಗೆಯಲ್ಲಿ ಮಲಗಿದ್ದ ಮಹಿಳೆಯೊಬ್ಬರ ಮೇಲೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಆರೋಪಿದ ಮೇಲೆ ಓರ್ವನನ್ನು ಕಡಬ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧಿತನನ್ನು ಕಡಬ ನಿವಾಸಿ ಉಮೇಶ್ ಗೌಡ ಎಂದು ಗುರುತಿಸಲಾಗಿದೆ. ನವೆಂಬರ್ 13 ರಂದು ರಾತ್ರಿ ಸಂತ್ರಸ್ತೆ ಮಹಿಳೆ ಮನೆಯ ಹೊರ ಭಾಗದ ಕೊಟ್ಟಿಗೆಯಲ್ಲಿ ನಿದ್ರಿಸುತ್ತಿದ್ದ ವೇಳೆ ಆರೋಪಿಯು ಅಲ್ಲಿಗೆ ಅಕ್ರಮವಾಗಿ ಪ್ರವೇಶಿಸಿ ಲೈಂಗಿಕ ಕಿರುಕುಳ ನೀಡಲು ಯತ್ನಿಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಈ ವೇಳೆ ಸಂತ್ರಸ್ತೆ ಸಹಾಯಕ್ಕಾಗಿ ಬೊಬ್ಬೆ ಹೊಡೆದಿದ್ದು, ಮನೆಯೊಳಗಿದ್ದ ಆಕೆಯ ಪತಿ, ಮಕ್ಕಳು ಬಂದು ಆರೋಪಿಯನ್ನು ಹಿಡಿಯಲು ಯತ್ನಿಸಿದಾಗ, ಆರೋಪಿಯು ಹಲ್ಲೆ ನಡೆಸಿ, ಮಹಿಳೆಗೆ ಜಾತಿ ನಿಂದನೆ ಮಾಡಿರುವುದಾಗಿ ದೂರಿನಲ್ಲಿ ತಿಳಿದ್ದಾರೆ.




