ಮದುವೆಗೆ ಒಂದು ಗಂಟೆ ಮೊದಲು ವಧುವನ್ನು ಕಬ್ಬಿಣದ ರಾಡ್ ನಿಂದ ಹೊಡೆದು ಕೊಂದ ವರ
ಗುಜರಾತ್: ಕ್ಷುಲ್ಲಕ ಕಾರಣಕ್ಕೆ ಮದುವೆಗೆ ಕೆಲವೆ ಗಂಟೆಗಳಿರುವಾಗ ವರ ತನ್ನ ಭಾವಿ ಪತ್ನಿಯನ್ನು ಕಬ್ಬಣದ ರಾಡ್ ನಿಂದ ಹೊಡೆದು ಕೊಲೆ ಮಾಡಿದ್ದಾನೆ. ಗುಜರಾತ್‌ನ ಭಾವನಗರದಲ್ಲಿ ಈ ಘಟನೆ ನಡೆದಿದೆ.
ಕೊಲೆಯಾದ ವಧುವನ್ನು ಸೋನಿ ಎಂದು ಗುರುತಿಸಲಾಗಿದ್ದು, ಕೊಲೆ ಆರೋಪಿ ವರ ಸಜನ್ ಎಂದು ತಿಳಿದು ಬಂದಿದೆ. ಸೋನಿ ಹಾಗೂ ಸಜನ್ ಇಬ್ಬರೂ ವರ್ಷಗಳ ಲಿವಿಂಗ್ ರಿಲೇಶನ್ ಶಿಪ್ ನಲ್ಲಿದ್ದರು, ಇತ್ತೀಚೆಗೆ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದರು. ನವೆಂಬರ್ 14 ರಂದು ಮದುವೆ ಸಮಾರಂಭಗಳು ಪ್ರಾರಂಭವಾಗಬೇಕಿತ್ತು.
ಸೋನಿ ತನ್ನ ಕೈ ಮತ್ತು ಕಾಲುಗಳಿಗೆ ಮೆಹೆಂದಿ ಹಚ್ಚಿಕೊಂಡಿದ್ದಳು, ಒಂದು ಬದಿಯಲ್ಲಿ “ಸಜನ್” ಮತ್ತು ಇನ್ನೊಂದು ಬದಿಯಲ್ಲಿ “ಸದಾ ಸೌಭಾಗ್ಯವತಿ ಭಾವ” ಎಂದು ಬರೆದಿದ್ದಳು. ಒಂದು ಕೈಯಲ್ಲಿ “ಐ ಲವ್ ಸಜನ್” ಎಂದು ಬರೆಯುವ ಹಚ್ಚೆಯನ್ನೂ ಹಾಕಿಸಿಕೊಂಡಿದ್ದಳು.
ಆದರೆ, ಮದುವೆಯ ದಿನದಂದು, ಸಾಜನ್ ಸೋನಿಯ ಮೇಲೆ ಪೈಪ್‌ನಿಂದ ಹಲ್ಲೆ ಮಾಡಿ, ತಲೆಗೆ ಹೊಡೆದು, ನಂತರ ಟೆಕ್ರಿ ಚೌಕ್ ಬಳಿ ಗೋಡೆಗೆ ಡಿಕ್ಕಿ ಹೊಡೆದು ಆಕೆಯನ್ನು ಕೊಲೆ ಮಾಡಿದ್ದಾನೆ.
ಮದುವೆಗೆ ಕೇವಲ ಒಂದು ಗಂಟೆ ಮೊದಲು ಸೀರೆ ಮತ್ತು ಹಣದ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.




