September 16, 2026

2,000 ರೂ. ಹೆಚ್ಚಿನ ಯುಪಿಐ ಪಾವತಿಗೆ ಶೇ. 0.4ರಷ್ಟು ಶುಲ್ಕ:
ಹೊಸ ವ್ಯವಸ್ಥೆ ಅಕ್ಟೋಬರ್‌ 15ರಿಂದ ಜಾರಿಗೆ

0
image_editor_output_image-2059465551-1789547211485

ನವದೆಹಲಿ: ವ್ಯಾಪಾರಿಗಳಿಗೆ ಸುಮಾರು ಆರು ವರ್ಷಗಳಿಂದ ಸಂಪೂರ್ಣ ಉಚಿತವಾಗಿದ್ದ ಏಕೀಕೃತ ಪಾವತಿ ವ್ಯವಸ್ಥೆಯಲ್ಲಿ (ಯುಪಿಐ) ಸರ್ಕಾರ ಬದಲಾವಣೆ ತಂದಿದ್ದು, ₹2 ಸಾವಿರಕ್ಕಿಂತ ಹೆಚ್ಚಿನ ಪಾವತಿಗಳ ಮೇಲೆ ಶೇ 0.4 ಎಂಡಿಆರ್‌ (ಮರ್ಚೆಂಟ್ ಡಿಸ್ಕೌಂಟ್ ರೇಟ್) ವಿಧಿಸಲು ನಿರ್ಧರಿಸಿದೆ.

ಹೊಸ ವ್ಯವಸ್ಥೆ ಅಕ್ಟೋಬರ್‌ 15ರಿಂದ ಜಾರಿಗೆ ಬರಲಿದ್ದು, ₹75 ಸಾವಿರ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಪಾವತಿಗಳಿಗೆ ಶುಲ್ಕದ ಗರಿಷ್ಠ ಮಿತಿಯನ್ನು ₹300ಕ್ಕೆ ನಿಗದಿಪಡಿಸಲಾಗಿದೆ. ವ್ಯಕ್ತಿಯಿಂದ ವ್ಯಕ್ತಿಯ ನಡುವೆ (ಪರ್ಸನ್‌ ಟು ಪರ್ಸನ್‌– ಪಿ2ಪಿ) ಯುಪಿಐ ಮೂಲಕ ನಡೆಯುವ ದೈನಂದಿನ ಹಣ ವರ್ಗಾವಣೆ ಯನ್ನು ಶುಲ್ಕದಿಂದ ಹೊರಗಿಡಲಾಗಿದೆ.

‘ವ್ಯಕ್ತಿಯಿಂದ ವ್ಯಕ್ತಿಗೆ ನಡೆಯುವ ಹಣ ವರ್ಗಾವಣೆಗಳು ಯುಪಿಐ ವಹಿವಾಟುಗಳ ಒಟ್ಟು ಸಂಖ್ಯೆಯಲ್ಲಿ ಶೇ 37ರಷ್ಟು ಮತ್ತು ವಹಿವಾಟಿನ ಮೌಲ್ಯದಲ್ಲಿ ಶೇ 70ರಷ್ಟು ಪಾಲು ಹೊಂದಿವೆ. ‘ಪಿ2ಪಿ’ ವರ್ಗಾವಣೆಯ ಮೊತ್ತ ಎಷ್ಟೇ ಇದ್ದರೂ ಶುಲ್ಕವಿರುವುದಿಲ್ಲ. ವ್ಯಕ್ತಿಯಿಂದ ವರ್ತಕನಿಗೆ (ಪರ್ಸನ್‌ ಟು ಮರ್ಚೆಂಟ್– ಪಿ2ಎಂ) ನಡೆಯುವ ₹2 ಸಾವಿರಕ್ಕಿಂತ ಕಡಿಮೆ ಮೊತ್ತದ ವಹಿವಾಟುಗಳ ಮೇಲೂ ಎಂಡಿಆರ್‌ ಇರುವುದಿಲ್ಲ. ಇದು ಒಟ್ಟು ‘ಪಿ2ಎಂ’ ವಹಿವಾಟುಗಳ ಸಂಖ್ಯೆಯಲ್ಲಿ ಶೇ 95ಕ್ಕಿಂತ ಹೆಚ್ಚು ಪಾಲನ್ನು ಹೊಂದಿದೆ’ ಎಂದು ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

You may have missed

error: Content is protected !!