ಹಳ್ಳದಲ್ಲಿ ಕೊಚ್ಚಿ ಹೋದ ಕಾರು: ಮೂವರು ಮಕ್ಕಳು ಸೇರಿ 8 ಮಂದಿ ಸಾವು
ಭೋಪಾಲ್: ಮಳೆಯಿಂದ ಉಕ್ಕಿ ಹರಿಯುತ್ತಿದ್ದ ಹಳದಲ್ಲಿ ಕಾರು ಕೊಚ್ಚಿ ಹೋಗಿ ಎಂಟು ಮಂದಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಅಗರ್‌ಮಾಲ್ವಾ ಜಿಲ್ಲೆಯ ಮಾ ಬಾಗ್ಲಾಮುಖಿ ದೇವಸ್ಥಾನದ ನಡೆದಿದೆ.
ಅವಘಡದಲ್ಲಿ ಓಡಿಶಾ (Odisha) ಮೂಲದ ಇಬ್ಬರು ಮಹಿಳೆಯರು, ಮೂವರು ಪುರುಷರು ಹಾಗೂ ಮೂರು ಮಕ್ಕಳು ಸಾವನ್ನಪ್ಪಿದ್ದಾರೆ. ಮೃತರೆಲ್ಲರು ಉಜ್ಜಯಿನಿಯಿಂದ ಮಾ ಬಾಗ್ಲಾಮುಖಿ ದೇವಸ್ಥಾನಕ್ಕೆ ಭೇಟಿ ನೀಡಲು ಆಗಮಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.




