September 19, 2026

ಅಂಗಡಿಗೆ ಗುದ್ದಿದ ಬೈಕ್: ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮೃತ್ಯು

0
image_editor_output_image-1672217394-1789820191033

ಬೆಂಗಳೂರು: ಯಲಹಂಕದ  ರಾಜಾನುಕುಂಟೆ ರಸ್ತೆಯಲ್ಲಿ ಅಂಗಡಿಯ ಗೋಡೆಗೆ ರಾಯಲ್ ಎನ್‌ಫೀಲ್ಡ್ ಬೈಕ್‌ ಗುದ್ದಿದ ಪರಿಣಾಮ ಇಬ್ಬರು ಎಂಜಿನಿಯರ್‌ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.

ವಚನ್ ಮತ್ತು ಪ್ರದೀಪ್ ಮೃತ ವಿದ್ಯಾರ್ಥಿಗಳು. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ಅಪಘಾತ ನಡೆದಿದೆ. ಬೆಳಗಿನ ಜಾವ ಸುತ್ತಾಡಲು ಇಬ್ಬರು ಬಂದಿದ್ದರು. ಈ ವೇಳೆ ಅಪಘಾತ  ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನಾ ಸ್ಥಳಕ್ಕೆ ಯಲಹಂಕ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!