September 19, 2026

ಕಡಬ: ಎರ್ಮಾಳ ರಕ್ಷಿತಾರಣ್ಯದಲ್ಲಿ ವ್ಯಕ್ತಿ ಆತ್ಮಹತ್ಯೆ

0
image_editor_output_image-1675911478-1789799463138

ಕಡಬ: ಪೆರಾಬೆ ಗ್ರಾಮದ ಕೋಡಿಯಡ್ಕ ನಿವಾಸಿ ದಿ.ಕುಂಞಣ್ಣ ಗೌಡ ಅವರ ಪುತ್ರ ಶೇಖರ ಗೌಡ(43ವ.)ಅವರು ಎರ್ಮಾಳ ರಕ್ಷಿತಾರಣ್ಯದಲ್ಲಿ ಉಟ್ಟ ಬಟ್ಟೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.

ಸೆ.17ರ ರಾತ್ರಿಯೇ ಮನೆಯಿಂದ ತನ್ನ ಸ್ಕೂಟಿಯಲ್ಲಿ ಹೊರಟಿದ್ದ ಶೇಖರ ಗೌಡ ಅವರು ಸ್ಕೂಟಿಯನ್ನು ಸಂಬಂಧಿಕರೋರ್ವರ ಮನೆಯಲ್ಲಿ ಇಟ್ಟು ಕಾಡಿಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಬೆಳಿಗ್ಗೆ ಸ್ಥಳೀಯರು ಹುಡುಕಾಟ ನಡೆಸಿದ್ದು ಮರದ ಕೊಂಬೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳು ಸಹೋದರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!