September 19, 2026

ಪುತ್ತೂರು:  ವಾಹನ ತೊಳೆಯುತ್ತಿದ್ದಾಗ ವಿದ್ಯುತ್‌ ತಗಲಿ ಯುವಕ ಸಾವು

0
image_editor_output_image-1676834999-1789799252726

ಪುತ್ತೂರು: ಕೃಷ್ಣನಗರ ಬಡಾವು ನಿವಾಸಿ ಯುವಕ ಮನೆಯಂಗಳದಲ್ಲಿ ತನ್ನ ವಾಹನ ತೊಳೆಯುತ್ತಿದ್ದ ವೇಳೆ ವಿದ್ಯುತ್ ಶಾಕ್ ತಗುಲಿ ಮೃತಪಟ್ಟ ಘಟನೆ ನಡೆದಿದ್ದು, ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೃಷ್ಣನಗರ ಬಡಾವು ನಿವಾಸಿ ಈಶ್ವರ ನಾಯ್ಕ ಎಂಬವರ ಪುತ್ರ ರಕ್ಷಿತ್ (29ವ) ಮೃತಪಟ್ಟವರು. ರಕ್ಷಿತ್ ಪುತ್ತೂರು ಅಪೊಲೋ ಮೆಡಿಕಲ್ ಸೆಂಟರ್‌ನಲ್ಲಿ ಮಧ್ಯಾಹ್ನದ ಶಿಫ್ಟ್ ಕೆಲಸ ಮುಗಿಸಿ ಮನೆಗೆ ಬಂದವರು ಮನೆಯಂಗಳದಲ್ಲಿ ತನ್ನ ವಾಹನವನ್ನು ಮೆಷಿನ್‌ನಲ್ಲಿ ತೊಳೆಯುತ್ತಿದ್ದರೆನ್ನಲಾಗಿದೆ.

ಈ ವೇಳೆ ವಿದ್ಯುತ್ ಶಾಕ್ ತಗುಲಿ ರಕ್ಷಿತ್ ಮೃತಪಟ್ಟಿರುವ ಕುರಿತು ಮೃತರ ತಂದೆ ಈಶ್ವರ ನಾಯ್ಕ್ ಅವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!