September 19, 2026

ದರ್ಬೆ ಅಂಗಡಿ ಮಾಲಕಿಗೆ ಹಲ್ಲೆ ಪ್ರಕರಣ : ಇಬ್ಬರು ಆರೋಪಿಗಳಿಗೆ ಜಾಮೀನು

0
image_editor_output_image-1677758520-1789799082950

ಪುತ್ತೂರು:ಕೆಲ ದಿನಗಳ ಹಿಂದೆ ಇಲ್ಲಿನ ದರ್ಬೆಯಲ್ಲಿ ನಡೆದಿರುವ ಗಲಾಟೆ ಸಂದರ್ಭ ಅಂಗಡಿ ಮಾಲಕಿ ಅಂಜನಾ ಎಸ್.ಜೈ ಅವರಿಗೆ ಹಲ್ಲೆ ನಡೆಸಿ,ಬೆದರಿಕೆಯೊಡ್ಡಿದ್ದ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಲ್ಯಾಮಿನೇಶನ್ ಮಾಡಲೆಂದು ನೀಡಿದ್ದ ಜನನ ಪ್ರಮಾಣ ಪತ್ರವೊಂದಕ್ಕೆ ಹಾನಿಯಾದ ಘಟನೆಗೆ ಸಂಬಂಧಿಸಿ ಅಂಗಡಿ ಮಾಲಕರು ಮತ್ತು ಗ್ರಾಹಕರ ನಡುವೆ ಗಲಾಟೆ ನಡೆದಿತ್ತು.ಈ ಸಂದರ್ಭ ಅಲ್ಲಿ ನೂರಾರು ಮಂದಿ ಸೇರಿದ್ದ ಸಂದರ್ಭ ಅಂಗಡಿ ಮಾಲಕಿ ಅಂಜನಾ ಎಸ್.ಪೈ ಅವರಿಗೆ ಹಲ್ಲೆ ನಡೆಸಿ ಬೆದರಿಕೆಯೊಡ್ಡಿದ್ದ ಆರೋಪದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದ ಚಿಕ್ಕಮುಡ್ನೂರು ತಾರಿಗುಡ್ಡೆ ನಿವಾಸಿ ಮಹಮ್ಮದ್ ನೌಷಾದ್ (32) ಮತ್ತು ಪೆರ್ನೆಯ ಅಬ್ದುಲ್ ನಿಯಾಝ್ (26ವ.)ಎಂಬವರಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.ಆರೋಪಿಗಳ ಪರ ವಕೀಲ ಅಬ್ದುಲ್ ರಹಿಮಾನ್ ಹಿರೇಬಂಡಾಡಿ ವಾದಿಸಿದ್ದರು.

Leave a Reply

Your email address will not be published. Required fields are marked *

error: Content is protected !!