ಉಳ್ಳಾಲ: ಕಾಲೇಜು ವಿದ್ಯಾರ್ಥಿ ಮಾಲಿಕ್ ಅಬೂಬಕರ್ ನಾಪತ್ತೆ
ಉಳ್ಳಾಲ: ದೇರಳಕಟ್ಟೆ ಖಾಸಗಿ ಕಾಲೇಜು ವಿದ್ಯಾರ್ಥಿ ಮಾಲಿಕ್ ಅಬೂಬಕರ್ ನಾಪತ್ತೆಯಾದ ಬಗ್ಗೆ ವರದಿಯಾಗಿದ್ದು, ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇರಳ ಪಾಲಕ್ಕಾಡ್ ನಿವಾಸಿ ರಾಬಿಯ, ಅಬೂಬಕರ್ ದಂಪತಿಯ ಪುತ್ರ ಮಾಲೀಕ್ ಅಬೂಬಕರ್ ಅವರು ದೇರಳಕಟ್ಟೆ ಖಾಸಗಿ ಕಾಲೇಜಿನಲ್ಲಿ ಬಿಎನ್‌ವೈಎಸ್ ಶಿಕ್ಷಣ ಪಡೆಯುತ್ತಿದ್ದು ಅವರು ತಅಬ್ದುಲ್ ಶರೀಫ್ ಎಂಬವರ ಪಿಜಿಯಲ್ಲಿ ವಾಸವಾಗಿದ್ದರು. ನ.13 ರಂದು ರಾತ್ರಿ ಊ ಮಾಡಿ ಬರುತ್ತೇನೆ ಎಂದು ಹೇಳಿ ಹೋದವರು ವಾಪಸ್ ಪಿಜಿಗೆ ಬಾರದೆ ನಾಪತ್ತೆ ಆಗಿದ್ದಾರೆ ಎಂದು ತಿಳಿದು ಬಂದಿದೆ .
ಈ ಕುರಿತು ಮಾಲೀಕ್ ಅಬೂಬಕರ್ ಅವರ ತಾಯಿಯ ತಮ್ಮ ಫಿಸಿಯೊತೆರಪಿ ವೈದ್ಯ ಅಝಲ್ ಟಿ.ಎ. ನೀಡಿದ ದೂರಿನಂತೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





