March 18, 2026

ಕಾಂಕ್ರೀಟ್ ಮಿಕ್ಸರ್ ವಾಹನ, ಬೈಕ್ ನಡುವೆ ಅಪಘಾತ: ಬೈಕ್  ಸವಾರಿಬ್ಬರು ಸ್ಥಳದಲ್ಲೇ ಸಾವು

0
image_editor_output_image-953267966-1763277599317.jpg

ಗದಗ: ಕಾಂಕ್ರೀಟ್ ಮಿಕ್ಸರ್ ವಾಹನ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗದಗ ಎಮ್.ಜಿ.ಆರ್.ಡಿ.ಪಿ.ಆರ್ ವಿಶ್ವ ವಿದ್ಯಾಲಯ ಬಳಿ ನಡೆದಿದೆ.

9 ವರ್ಷದ ಮನೋಜ್ ಕಮತರ ಹಾಗೂ 18 ವರ್ಷದ ಆನಂದ ವಾರದ ಮೃತ ಯುವಕರು. ಮೃತರು ಗದಗ ತಾಲೂಕಿನ ನಾಗಾವಿಯ ಗ್ರಾಮದ ನಿವಾಸಿಗಳು ಎನ್ನಲಾಗಿದೆ. ಇದನ್ನೂ ಓದಿ: ಬುರುಡೆ ಕೇಸ್‌| ವಿಚಾರಣೆ ವೇಳೆ ಹಲ್ಲೆ – ಎಸ್‌ಐಟಿ ಅಧಿಕಾರಿಗಳ ವಿರುದ್ಧವೇ ಜಯಂತ್‌ ದೂರು

ಗದಗ ಟು ಹೊನ್ನಳ್ಳಿ-57 ರಾಜ್ಯ ಹೆದ್ದಾರಿ ಇದಾಗಿದ್ದು, ನಾಗಾವಿ ಬಳಿಯ ಮಹಾತ್ಮ ಗಾಂಧಿ ಗ್ರಾಮೀಣಭಿವೃದ್ಧಿ ಪಂಚಾಯತ್ ರಾಜ್ ವಿಶ್ವ ವಿದ್ಯಾನಿಲಯದ ಗೇಟ್ ಬಳಿ ಅಪಘಾತ ನಡೆದಿದೆ.

ಮೃತರು ಗದಗ ಜಿಮ್ಸ್ ನಿಂದ ನಾಗಾವಿ ಗ್ರಾಮಕ್ಕೆ ಹೊರಟಿದ್ದರು. ಅತಿಯಾದ ವೇಗದಲ್ಲಿ ಓವರ್ ಟೆಕ್ ಮಾಡುವ ವೇಳೆ ಎದುರು ಬರುತ್ತಿದ್ದ ಕಾಂಕ್ರೀಟ್ ಮಿಕ್ಸರ್ ವಾಹನಕ್ಕೆ ಹೊಡೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!