ದುಬೈ: ಕಟ್ಟಡದ ಮೇಲೆ ನಿಂತು ಪೋಟೋ ತೆಗೆಯುವಾಗ ಕೆಳಗೆ ಬಿದ್ದು ಕೇರಳದ ಯುವಕ ಸಾವು
ದುಬೈ: ಗಗನಚುಂಬಿ ವಸತಿಕಟ್ಟಡದ ಮೇಲೆ ನಿಂತು ವಿಮಾನ ಪೋಟೋ ತೆಗೆಯಲು ಹೋದ ಕೇರಳದ ಯುವಕ ಆಯತಪ್ಪಿ ಕೆಳಗೆ ಬಿದ್ದು ಸಾವನಪ್ಪಿದ ಘಟನೆ ನಡೆದಿದೆ.
ಮೃತನನ್ನು ಕೋಝಿಕ್ಕೋಡ್‌ನ ವೆಲ್ಲಿಪರಂಬದ 19 ವರ್ಷ ಪ್ರಾಯದ ಮೊಹಮ್ಮದ್ ಮಿಶಾಲ್ ಎಂದು ಗುರುತಿಸಲಾಗಿದೆ. ಈತ ಟೂರಿಸ್ಟ್ ವಿಸಾದಲ್ಲಿ ದುಬೈಗೆ ತೆರಳಿದ್ದು, ಸುಮಾರು ಎರಡು ವಾರಗಳ ಕಾಲ ತಮ್ಮ ಸೋದರಸಂಬಂಧಿಗಳೊಂದಿಗೆ ವಾಸಿಸುತ್ತಿದ್ದರು.
ಮುನೀರ್ ಮತ್ತು ಆಯೇಷಾ ದಂಪತಿಯ ಏಕೈಕ ಪುತ್ರನಾಗಿದ್ದ ಈತ ತನ್ನ ಹೆತ್ತವರು ಮತ್ತು ಇಬ್ಬರು ಸಹೋದರಿಯರನ್ನು ಅಗಲಿದ್ದಾನೆ.
ನವೆಂಬರ್ 7, ಶುಕ್ರವಾರದಂದು ಈ ಘಟನೆ ಸಂಭವಿಸಿದೆ, ಮಿಶಾಲ್ ವಿಮಾನದ ಹತ್ತಿರದ ಚಿತ್ರಗಳನ್ನು ಸೆರೆಹಿಡಿಯಲು ಪ್ರಯತ್ನಿಸುವಾಗ ಸಮತೋಲನ ಕಳೆದುಕೊಂಡು ಕಟ್ಟಡದಿಂದ ಕೆಳಗೆ ಬಿದ್ದಿದ್ದಾರೆ.
ಗಂಭೀರ ಗಾಯಗೊಂಡ ಮಿಶಾಲ್ ನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಆದರೆ ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು.
ಮಿಶಾಲ್ ಅವರ ಸ್ವದೇಶಕ್ಕೆ ವಾಪಸ್ ಕಳುಹಿಸುವ ಪ್ರಕ್ರಿಯೆಗಳು ನಡೆಯುತ್ತಿದ್ದು, ಅವರ ಮೃತದೇಹಗಳನ್ನು ಶೀಘ್ರದಲ್ಲೇ ಕೋಝಿಕ್ಕೋಡ್‌ಗೆ ಅಂತಿಮ ವಿಧಿವಿಧಾನಗಳಿಗಾಗಿ ಕರೆದೊಯ್ಯುವ ನಿರೀಕ್ಷೆಯಿದೆ.





