February 3, 2026

ಉಪ್ಪಿನಂಗಡಿ: ಎಸ್.ಬಿ.ಎಸ್ ಸರಳಿಕಟ್ಟೆ ಶಾಖೆಯ ಇಪ್ಪತ್ತನೇ ವರ್ಷಾಚರಣೆ ಪ್ರಯುಕ್ತ: ವಿವಿಧ ಇಪ್ಪತ್ತುಅಂಶಗಳ ಕಾರ್ಯಕ್ರಮ ‘ವೆಸಿನರಿ’ ಸಮಾರೋಪ.

0
IMG-20211226-WA0029

ಉಪ್ಪಿನಂಗಡಿ: ನೂರುಲ್ ಇಸ್ಲಾಂ ಹೈಯರ್ ಸೆಕೆಂಡರಿ‌‌ ಮದ್ರಸ ಸರಳಿಕಟ್ಟೆ ಇಲ್ಲಿನ ವಿದ್ಯಾರ್ಥಿ ಸಂಘಟನೆ ಎಸ್ ಬಿ ಎಸ್ ನ ಇಪ್ಪತ್ತನೇ ವರ್ಷಾಚರಣೆಯ ಪ್ರಯುಕ್ತ ಹಮ್ಮಿಕೊಂಡಿದ್ದ ಇಪ್ಪತ್ತು ಅಂಶಗಳ ಕಾರ್ಯಕ್ರಮದ ಸಮಾರೋಪ ಸಮಾರಂಭವು ಮಕ್ಕಳ ಇಸ್ಲಾಮಿಕ್ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮುಕ್ತಾಯಗೊಂಡಿತು.

ಡಿ. 24 ಮತ್ತು 25 ರಂದು ಸರಳಿಕಟ್ಟೆ ಮದರಸಾ ವಠಾರದಲ್ಲಿ ನಡೆದ ದ್ವಿದಿನ ಧಾರ್ಮಿಕ ಕಾರ್ಯಕ್ರಮಕ್ಕೆ ಅಸ್ಸಯ್ಯದ್ ಹಂಝ ತಂಙಳ್ ಪಾಟ್ರಕೋಡಿ ದುಃವಾಶೀರ್ವಚನ ನೀಡಿದರು.

ನೂರುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸ ವಿದ್ಯಾರ್ಥಿ ಸಂಘಟನೆ ಸುನ್ನೀ ಬಾಲ ಸಂಘ (ಎಸ್.ಬಿ.ಎಸ್) ಇದರ ಇಪ್ಪತ್ತನೇ ವರ್ಷಾಚರಣೆಯ ಪ್ರಯುಕ್ತ ವಿವಿಧ ಇಪ್ಪತ್ತು ಅಂಶಗಳ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿತ್ತು, ಇದರ ಪ್ರಯುಕ್ತ ಧ್ವಜಾರೋಹಣ, ಪೋಸ್ಟರ್ ಬಿಡುಗಡೆ, ಸದಸ್ಯತ್ವ ಅಭಿಯಾನ, ರಬೀಅ್ ಘೋಷಣಾ ಕಾರ್ಯಕ್ರಮ, ರಬೀಅ್ ಕ್ವಿಝ್, ಮದ್ರಸ ಪರಿಸರ ಶುಚೀಕರಣ, ವಿದ್ಯಾರ್ಥಿಗಳಿಂದ ಮೌಲಿದ್ ಮಜ್ಲಿಸ್, ಮದ್ರಸಾ ಸೆಮಿನಾರ್, ಫಿಕ್ಹ್ ವಿಚಾರ ಸಂಕಿರಣ, ಕಬ್ ರ್ ಝಿಯಾರತ್, ಮಾದಕ ದ್ರವ್ಯದ ವಿರುದ್ದ ಜನಜಾಗೃತಿ, ತಿಝ್ ಕಾರೇ ಜೀಲಾನಿ, ರಿಫಾಯಿ ಅನುಸ್ಮರಣೆ, ನನ್ನ ಮನೆ ಅಂಗಳದಲ್ಲಿ ನನ್ನ ಗಾರ್ಡನ್, ಮ್ಯಾಗಝಿನ್ ಬಿಡುಗಡೆ, ದಫ್ ಪ್ರದರ್ಶನ, ಅಗಲಿದ ವಿದ್ಯಾರ್ಥಿಗಳ ಅನುಸ್ಮರಣೆ, ಅಲ್ಯುಮಿನಿ ಮೀಟ್, ರಕ್ಷಕ ಮೀಟ್, ಆತ್ಮೀಯ ಸಂಗಮದ  ಸಮಾರೋಪ ಸಮಾರಂಭವು  ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಶೈಖುನಾ ಅಬ್ಬಾಸ್ ಸಅದಿ ಮುದರ್ರಿಸ್ ತಾಜುಲ್ ಉಲಮಾ ರೌಲತುಲ್ ಉಲೂಂ ದರ್ಸ್ ಇವರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಳಿಕಟ್ಟೆ ಜಮಾಅತ್ ಅಧ್ಯಕ್ಷರಾದ  ಅಬ್ದುಲ್ ಹಮೀದ್ ಹಾಜಿ ವಹಿಸಿದ್ದರು.

ಯುವ ವಾಗ್ಮಿ ನೌಫಲ್ ಸಖಾಫಿ ಕಳಸ ಅವರು ಮುಖ್ಯ ಪ್ರಭಾಷಣ ನಡೆಸಿದರು. ಸ್ಥಳೀಯ ಖತೀಬ್ ಮುತ್ತಲಿಬ್ ಸಖಾಫಿ ಪ್ರಾಸ್ತಾವಿಕವಾಗಿ  ಸಂದರ್ಭೋಚಿತ ಮಾತುಗಳನ್ನಾಡಿದರು.


ವೇದಿಕೆಯಲ್ಲಿ ಸ್ವಲಾಹುದ್ದೀನ್ ಸಖಾಫಿ, ಅಶ್ರಫ್ ಸಖಾಫಿ ಮಾಡಾವು, ಶುಹೈಬ್ ಸಅದಿ,  ಖಲೀಲ್ ಸಅದಿ ಕುಕ್ಕಾಜೆ, ಇಲ್ಯಾಸ್ ಮದನಿ ಸೆರ್ಕಳ, ಸಿರಾಜುದ್ದೀನ್ ಮದನಿ, ಉಸ್ಮಾನ್ ಸಅದಿ, ಅಬ್ದುಲ್ ಅಝೀಝ್ ನಯೀಮಿ, ಅಬ್ದುಲ್ ಮಜೀದ್ ನಯೀಮಿ, ಹಂಝ ಸಖಾಫಿ, ಮುಈನುದ್ದೀನ್ ಮದನಿ, ಅಬೂಬಕ್ಕರ್ ಸಿದ್ದೀಕ್ ಸಖಾಫಿ,  ನೌಫಲ್ ಸಅದಿ, ನೌಷದ್  ಸ ಅದಿ, ಹನೀಫ್ ಮುಸ್ಲಿಯಾರ್, ಅಹ್ಮದ್ ಕುಂಞ, ಹಾಜಿ ಅಬ್ದುಲ್ ಲತೀಫ್ , ಯೂಸುಫ್   ಹಾಜಿ, ಉಸ್ಮಾನ್ ಹಾಜಿ, ಯೂಸುಫ್ ಹಾಜಿ ಕುರುಬರಪಾಲು, ಅಬ್ಬಾಸ್ ಮಡಿಕೆರೆಬೊಟ್ಟು, ಉಮ್ಮರ್ ಕುಂಞ ಮುಸ್ಲಿಯಾರ್, ಅಬ್ದುಲ್ ರಝಾಖ್ ಲತೀಫಿ, ಉಸ್ಮಾನ್ ಸಖಾಫಿ, ಅಬ್ದುಲ್ ಹಮೀದ್ ಮಿಸ್ಬಾಹಿ, ಮುಹಮ್ಮದ್ ಸಖಾಫಿ, ಸರಳಿಕಟ್ಟೆ ಸೆಕ್ಟರ್ ಎಸ್ಸೆಸ್ಸೆಫ್ ಅಧ್ಯಕ್ಷ ನಾಸಿರ್  ಸಅದಿ, ಜಿ.ಎಂ. ಮಹಮ್ಮದ್ ಕುಂಞ, ಸರಳಿಕಟ್ಟೆ ಶಾಖೆ ಎಸ್ಸೆಸ್ಸೆಫ್ ಅಧ್ಯಕ್ಷ ಜಮಾಲುದ್ದೀನ್, ಎಸ್ಸೆಸ್ಸೆಫ್ ಪ್ರಧಾನ ಕಾರ್ಯದರ್ಶಿ ಮುಬಶ್ಶಿರ್, ಅಬ್ದುಲ್ ಖಾದಿರ್ ಮುಸ್ಲಿಯಾರ್, ಇಸ್ಹಾಕ್ ಹಾಜಿ ಮೇದರಬೆಟ್ಟು, ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ಹಕೀಂ ತನಲ್, ಎಸ್ ಬಿಎಸ್ ಸರಳಿಕಟ್ಟೆ ಶಾಖಾಧ್ಯಕ್ಷ ಮಹಮ್ಮದ್ ಹಾಶಿರ್
ಉಪಸ್ಥಿತರಿದ್ದರು.

ಶಮೀರ್ ಸಖಾಫಿ ಬೈತಡ್ಕ ಕಾರ್ಯಕ್ರಮ ನಿರ್ವಹಿಸಿದರೆ, ಇಲ್ಯಾಸ್ ಮದನಿ ಸೆರ್ಕಳ ಧನ್ಯವಾದವಿತ್ತರು.

Leave a Reply

Your email address will not be published. Required fields are marked *

You may have missed

error: Content is protected !!