March 22, 2026

ಹಾಕಿ ಆಟ ಆಡುತ್ತಿರುವ ಮಧ್ಯೆ ಹೃದಯಾಘಾತದಿಂದ ಹಾಕಿಪಟು ಮೃತ್ಯು

0
n3447697121640513648547da40dd2126280f30f52dbae30fc3b469349e54ce922065d26c87c8ec1249890b.jpg

ಮಡಿಕೇರಿ: ಆಟುವಾಡುತ್ತಿರುವಾಗಲೇ ಹಾಕಿಪಟುವೊಬ್ಬರಿಗೆ ಹೃದಯಾಘಾತವಾಗಿ ಮೃತಪಟ್ಟಿರುವ ಘಟನೆ ಶನಿವಾರ ಮೂರ್ನಾಡುವಿನಲ್ಲಿ ನಡೆದಿದೆ.

ತೊತ್ತಿಯಂಡ ಸೋಮಯ್ಯ(22) ಎಂಬುವವರೇ ಮೃತ ದುರ್ದೈವಿ. ಮೂರ್ನಾಡುವಿನ ಲಾಲುಮುದ್ದಯ್ಯ ಮೈದಾನದಲ್ಲಿ ನಡೆಯುತ್ತಿರುವ ಚೌರೀರ ಹಾಕಿ ಟೂರ್ನಿ ಸಂದರ್ಭ ಕುಸಿದು ಬಿದ್ದ ಇವರನ್ನು ಮಡಿಕೇರಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಸಂದರ್ಭ ಕೊನೆಯುಸಿರೆಳೆದಿದ್ದಾರೆ.

ಮೂರ್ನಾಡು ಬಲಮುರಿ ಗ್ರಾಮ ನಿವಾಸಿ ತೊತ್ತಿಯಂಡ ವಿಠಲ್ ದೇವಯ್ಯ ಅವರ ಪುತ್ರರಾಗಿರುವ ಸೋಮಯ್ಯ ಅವರು ಶನಿವಾರ ನಡೆಯುತ್ತಿದ್ದ ಹಾಕಿ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನ 2 ಗಂಟೆಯ ವೇಳೆಗೆ 10ನೇ ಪಂದ್ಯವಾಗಿ ಬಟ್ಟೀರ ಹಾಗೂ ತೊತ್ತಿಯಂಡ ಕುಟುಂಬಗಳ ನಡುವೆ ಮೈದಾನ 2ರಲ್ಲಿ ಪಂದ್ಯಾವಳಿ ನಡೆಯುತ್ತಿತ್ತು. ಈ ವೇಳೆ ಸೋಮಯ್ಯ ಅವರಿಗೆ ಹೃದಯಾಘಾತವಾಗಿ, ಕುಸಿದು ಬಿದ್ದಿದ್ದಾರೆ.

Leave a Reply

Your email address will not be published. Required fields are marked *

error: Content is protected !!