ಬೆಳ್ತಂಗಡಿ: 580 ಕೆ.ಜಿ ತೂಕದ ಬೃಹತ್ ಗಾತ್ರದ ಮಡಲ್ ಮೀನು ನೋಡಲು ಮುಗಿಬಿದ್ದ ಜನ
ಬೆಳ್ತಂಗಡಿ: ಉಜಿರೆಯ ಮೀನಿನ ಅಂಗಡಿಯೊಂದಕ್ಕೆ ಶುಕ್ರವಾರ 580 ಕೆ.ಜಿ ತೂಕದ ಬೃಹತ್ ಗಾತ್ರದ ಮಡಲ್ ಮೀನು ಬಂದಿದ್ದು, ಇದನ್ನು ನೋಡಲು ಮತ್ತು ಖರೀದಿಸಲು ಜನರು ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಅತ್ಯಂತ ರುಚಿಕರ ಹಾಗೂ ಮುಳ್ಳುಗಳಿಲ್ಲದ ಈ ಮೀನನ್ನು ಮಲ್ಪೆ ಬಂದರಿನಿಂದ ತರಲಾಗಿತ್ತು. ಮೀನು ಅತ್ಯಂತ ಬೃಹತ್ ಗಾತ್ರದಲ್ಲಿದ್ದ ಕಾರಣ, ಅದನ್ನು ವಾಹನದಿಂದ ಇಳಿಸಲು ಕ್ರೇನ್ ಬಳಸಲಾಯಿತು.
ಉಜಿರೆಗೆ ಇಷ್ಟು ದೊಡ್ಡ ಗಾತ್ರದ ಮೀನು ಬಂದಿರುವುದು ಇದು ನಾಲ್ಕನೇ ಬಾರಿಯಾಗಿದ್ದು, ಸ್ಥಳೀಯವಾಗಿ ಈ ಮೀನಿಗೆ ಭಾರಿ ಬೇಡಿಕೆಯಿದೆ.
ಈ ಮೀನನ್ನು ಪ್ರತಿ ಕೆ.ಜಿ.ಗೆ 350 ರೂ. ದರದಲ್ಲಿ ಮಾರಾಟ ಮಾಡಲಾಗಿದೆ ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ.




