November 21, 2026

ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳು : ವಾರ್ಷಿಕ ಕ್ರೀಡಾಕೂಟಸ್ಪರ್ಧಾತ್ಮಕ ಮನೋಭಾವ ಅಗತ್ಯ : ಗೋಪಾಲಕೃಷ್ಣ ಭಟ್

0
image_editor_output_image-1371658149-1795276837454

ನಂತೂರು: ಕ್ರೀಡಾಕೂಟವು ತಂಡದ ಒಗ್ಗಟ್ಟನ್ನು ಸಾರುತ್ತದೆ. ವಿದ್ಯಾರ್ಥಿಗಳಿಗೆ ಶಾರೀರಿಕ ವ್ಯಾಯಾಮ, ಸ್ಪರ್ಧಾತ್ಮಕ ಮನೋಭಾವವನ್ನು ಬೋಧಿಸುತ್ತದೆ. ಕ್ರೀಡಾಕೂಟವೂ ಶಿಕ್ಷಣದ ಒಂದು ಭಾಗ ಎಂದು ಮಂಗಳೂರು ನಗರ ವಿಶೇಷ ಘಟಕದ ಪೊಲೀಸ್ ನಿರೀಕ್ಷಕ ಗೋಪಾಲಕೃಷ್ಣ ಭಟ್ ಹೇಳಿದರು.

ಅವರು ನ.20ರಂದು ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ರೈಲ್ವೇ ಅಥ್ಲೆಟಿಕ್ ಚಾಂಪಿಯನ್ ಪವಿತ್ರಾ ಜಿ. ಅವರು ಮಾತನಾಡಿ, ಸೋತಾಗ ದೃಢವಾಗಿ, ಗೆದ್ದಾಗ ಬೀಗದೇ ಕಠಿನ ಪರಿಶ್ರಮ, ಧೈರ್ಯ, ಸವಾಲನ್ನು ಸಮರ್ಥವಾಗಿ ಎದುರಿಸಲು ಗಮನಹರಿಸಬೇಕು ಎಂದು ಹೇಳಿದರು.

ನ್ಯಾಯವಾದಿ ರವಿಪ್ರಸನ್ನ ಸಿ.ಕೆ. ಅವರು ಮಾತನಾಡಿ, ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡುವ ರೀತಿ ಮಾದರಿಯಾಗಿದೆ ಎಂದು ಹೇಳಿದರು.

ಶ್ರೀ ಭಾರತೀ ಸಮೂಹ ಸಂಸ್ಥೆಯ ಕಾರ್ಯಾಧ್ಯಕ್ಷ ಗಣೇಶಮೋಹನ ಕಾಶಿಮಠ ಅಧ್ಯಕ್ಷತೆ ವಹಿಸಿದ್ದರು.

ಸಂಸ್ಥೆಯ ಕಾರ್ಯದರ್ಶಿ ಶ್ರೀಕೃಷ್ಣ ನೀರಮೂಲೆ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಹರೀಶ್, ಪ್ರಾಂಶುಪಾಲ ಸಂದೀಪ್ ಆಚಾರ್ಯ, ಕೋ-ಆರ್ಡಿನೇಟರ್ ಜಯಂತಿ ಕೆ., ಉಪಪ್ರಾಂಶುಪಾಲರಾದ ರಾಜಶ್ರೀ, ಸಿಪಿಎಲ್ ಹೃತಿಕ್ ರವಿ ಕುಮಾರ್, ಬೋಧಕ, ಬೋಧಕೇತರ ವೃಂದದವರು ಉಪಸ್ಥಿತರಿದ್ದರು.

ಶಿಕ್ಷಕಿ ಸ್ನೇಹಗೌರಿ ಸ್ವಾಗತಿಸಿದರು. ಉಪನ್ಯಾಸಕಿ ಭಾಗ್ಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಮಲ್ಲಿಕಾ ವಂದಿಸಿದರು.

ಸಮಾರೋಪ, ಬಹುಮಾನ ವಿತರಣೆ :
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ದಂತ ವೈದ್ಯ ಡಾ.ಶ್ಯಾಮಕಿಶೋರ್ ಮಾತನಾಡಿ, ಶರೀರಕ್ಕೆ ವ್ಯಾಯಾಮ, ಉತ್ತಮ ಆಹಾರ, 8 ಗಂಟೆ ನಿದ್ದೆ ಮಾಡಿದಾಗ ಆರೋಗ್ಯ ಕಾಪಾಡುವುದು ಸುಲಭ. ಸದಾ ಕ್ರಿಯಾಶೀಲವಾಗಿರಬೇಕು ಎಂದು ಹೇಳಿದರು.

ಆಯುರ್ವೇದ ತಜ್ಞ ಡಾ.ಈಶ್ವರ ಭಟ್ ಪಳ್ಳಾದೆ ಅವರು ಮಾತನಾಡಿ, ನಿಯಮಿತ ಹಾಗೂ ಕ್ರಮಬದ್ಧ ಆಹಾರ, ಪರಿಶ್ರಮ, ಸೂಕ್ತ ನಿದ್ದೆಯ ಮೂಲಕ ಹಿರಿಯರು ಆರೋಗ್ಯವಂತರಾಗಿದ್ದರು. ಮಕ್ಕಳು ಹಿರಿಯರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಸಂಸ್ಥೆಯ ಕಾರ್ಯದರ್ಶಿ ಶ್ರೀಕೃಷ್ಣ ನೀರಮೂಲೆ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯಾಲಯ ಕಾರ್ಯದರ್ಶಿ ಎಂ.ಟಿ.ಭಟ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಹರೀಶ್, ಪ್ರಾಂಶುಪಾಲ ಸಂದೀಪ್ ಆಚಾರ್ಯ, ಸಿಪಿಎಲ್ ಹೃತಿಕ್ ರವಿ ಕುಮಾರ್, ಬೋಧಕ, ಬೋಧಕೇತರ ವೃಂದದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಉಪನ್ಯಾಸಕಿ ಪವಿತ್ರಾ ಸ್ವಾಗತಿಸಿದರು. ಶಿಕ್ಷಕಿ ತುಳಸಿ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಅಭಿಷೇಕ್  ವಂದಿಸಿದರು.

Leave a Reply

Your email address will not be published. Required fields are marked *

error: Content is protected !!