November 21, 2026

ಕಲ್ಲಡ್ಕದಲ್ಲಿ ಅಲ್ ಬಿರ್ರ್ ಫೆಸ್ಟ್ 2026 ಆಫ್‌ಸ್ಟೇಜ್ ಕಾರ್ಯಕ್ರಮ

0
image_editor_output_image-581884629-1795259808969

ಬಂಟ್ವಾಳ: ಕಲ್ಲಡ್ಕ ಎಂ.ಜೆ.ಎಂ. ಅಲ್ ಬಿರ್ರ್ ಸ್ಕೂಲ್ ಸಭಾಂಗಣದಲ್ಲಿ ಅಲ್ ಬಿರ್ರ್ ಫೆಸ್ಟ್ 2026ರ ಆಫ್‌ಸ್ಟೇಜ್ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಕಲ್ಲಡ್ಕ ಎಂ.ಜೆ.ಎಂ. ಅಧ್ಯಕ್ಷ ಅಬ್ದುಲ್ಲಾ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಮಸೀದಿಯ ಖತೀಬ್ ಸಯ್ಯಿದ್ ಅಲಿ ಮನ್ನಾನಿ ಕಾರ್ಯಕ್ರಮ ಉದ್ಘಾಟಿಸಿದರು. ಅಲ್ ಇನ್ಸ್‌ಪೆಕ್ಟರ್ ಎನ್.ಕೆ. ಅಹ್ಮದ್ ಮಾಸ್ಟರ್ ಅತಿಥಿಯಾಗಿ ಭಾಗವಹಿಸಿದ್ದರು.

ಅಲ್ ಬಿರ್ರ್ ಕರ್ನಾಟಕ ಸಂಯೋಜಕ ನವಾಝ್, ಅಲ್ ಬಿರ್ರ್ ಕಲ್ಲಡ್ಕ ಶಾಲಾ ಸಂಯೋಜಕ ಅಬೂಬಕ್ಕರ್ ಹಾಜಿ ಗೋಳ್ತಮಜಲು, ಝಕರಿಯಾ ಗೋಳ್ತಮಜಲು, ಅಬೂಬಕ್ಕರ್ ಮುರಬೈಲ್ ಹಾಗೂ ಎಂ.ಜೆ.ಎಂ. ಕೋಶಾಧಿಕಾರಿ ಜವಾಝ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 18 ಅಲ್ ಬಿರ್ರ್ ಶಾಲೆಗಳ ವಿದ್ಯಾರ್ಥಿಗಳು, ಶಾಲಾ ಸಂಚಾಲಕರು ಹಾಗೂ 100ಕ್ಕೂ ಅಧಿಕ ಶಿಕ್ಷಕಿಯರು ಭಾಗವಹಿಸಿದ್ದರು.

ಅಲ್ ಬಿರ್ರ್ ಸ್ಕೂಲ್ ಅಕಾಡೆಮಿಕ್ ಆರ್ಗನೈಸರ್ ಮುಹಮ್ಮದ್ ಕುಟ್ಟಿ ಮಾಸ್ಟರ್ ಪ್ರಸ್ತಾವನೆಗೈದರು. ಎಂ.ಜೆ.ಎಂ. ದಕ್ಷಿಣ ಕನ್ನಡ ಜಿಲ್ಲಾ ಸಂಯೋಜಕ ಕಲಂದರ್ ಶಾಫಿ ಸ್ವಾಗತಿಸಿದರು. ಎಂ.ಜೆ.ಎಂ. ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಪನಾಮ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!