December 15, 2025

ಕಾಲೇಜು ವಿದ್ಯಾರ್ಥಿನಿಯರು ಡ್ರೆಸ್ ಚೆಂಜ್ ಮಾಡುತ್ತಿರುವ ವೇಳೆ ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಣ: ABVP ಕಾರ್ಯಕರ್ತರ ಬಂಧನ

0
image_editor_output_image784649899-1760702711923.jpg

ಮಧ್ಯಪ್ರದೇಶ: ಕಾಲೇಜಿನ ವಿಧ್ಯಾರ್ಥಿನಿಯರು ಬಟ್ಟೆಬದಲಿಸುತ್ತಿರುವ ವೇಳೆ ವಿಡಿಯೋ ಮಾಡಿದ ಎಬಿವಿಪಿ ಕಾರ್ಯಕರ್ತರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಆರೋಪಿಗಳಲ್ಲಿ ಒಬ್ಬನನ್ನು 22 ವರ್ಷದ ಉಮೇಶ್ ಜೋಶಿ ಎಬಿವಿಪಿಯ ನಗರಾಧ್ಯಕ್ಷ; ಇನ್ನೊಬ್ಬ ಆರೋಪಿ ಅಜಯ್ ಗೌರ್ ಸಹ-ಕಾಲೇಜು ಮುಖಂಡ ಮತ್ತು ಹಿಮಾಂಶು ಬೈರಾಗಿ ಕೆಲಸಗಾರ ಎಂದು ತಿಳಿದುಬಂದಿದೆ.
ಮಧ್ಯಪ್ರದೇಶದ ಮಂದ್ಸೌರ್ ಜಿಲ್ಲೆಯ ಭಾನ್ಪುರದ ಸರ್ಕಾರಿ ಕಾಲೇಜಿನಲ್ಲಿ ಯುವಜನೋತ್ಸವ ಕಾರ್ಯಕ್ರಮ ನಡೆಯುತ್ತಿತ್ತು. ವಿದ್ಯಾರ್ಥಿನಿಯರು ಬಟ್ಟೆ ಬದಲಾಯಿಸುತ್ತಿದ್ದಾಗ, ನಾಲ್ವರು ವಿದ್ಯಾರ್ಥಿಗಳು ತಮ್ಮ ಫೋನ್ ಬಳಸಿ ಕಿಟಕಿಯ ಮೂಲಕ ಫೋಟೋ ಮತ್ತು ವೀಡಿಯೊಗಳನ್ನು ತೆಗೆದುಕೊಂಡಿದ್ದಾರೆ. ಇದನ್ನು ಕಂಡ ವಿದ್ಯಾರ್ಥಿನಿಯರು ತಕ್ಷಣವೇ ಎಚ್ಚರಿಕೆ ನೀಡಿ ಪ್ರಾಂಶುಪಾಲರಿಗೆ ದೂರು ನೀಡಿದರು.
ದೂರಿನ ನಂತರ ಪ್ರಾಂಶುಪಾಲರು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ, ವಿದ್ಯಾರ್ಥಿಗಳ ಕೃತ್ಯಗಳು ಬಹಿರಂಗಗೊಂಡಿವೆ. ಆರೋಪಿಗಳ ಮೊಬೈಲ್ ನಲ್ಲಿ ವಿಡಿಯೋ ಪತ್ತೆಯಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!