March 22, 2026

15-18 ವರ್ಷದ ಮಕ್ಕಳಿಗೆ ಜನವರಿ 3ನೇ ತಾರೀಕಿನಿಂದ ಕೊರೋನ ಲಸಿಕೆ: ನರೇಂದ್ರ ಮೋದಿ

0
eacf8780-5f68-11ec-88f8-ea94552386eb_1639766583871_1640401541227.jpg

ದೆಹಲಿ: ದೇಶದಲ್ಲಿ ಹೆಚ್ಚಾಗುತ್ತಿರುವ ಕೊರೋನಾ ರೂಪಾಂತರಿ ಓಮಿಕ್ರಾನ್ ಬಗ್ಗೆ ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದರು.

ಈ ಸಂಬಂಧ ಮಾತಾಡಿದ ಮೋದಿ, ಇಡೀ ಜಗತ್ತಿನಾದ್ಯಂತ ಓಮಿಕ್ರಾನ್ ಕೇಸ್ಗಳು ಹೆಚ್ಚಾಗುತ್ತಿವೆ. ಭಾರತದಲ್ಲೂ ಓಮಿಕ್ರಾನ್ ಕೇಸ್ ಹೆಚ್ಚಾಗುತ್ತಿದ್ದು, ಯಾರು ಭಯಪಡುವ ಅಗತ್ಯವಿಲ್ಲ. ಯಾವುದೇ ಗೊಂದಲಕ್ಕೀಡಾಗಬೇಡಿ, ಬದಲಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಕಡ್ಡಾಯ ಮಾಸ್ಕ್ ಧರಿಸಿ, ವ್ಯಾಕ್ಸಿನೇಷನ್ ತೆಗೆದುಕೊಳ್ಳಿ ಎಂದರು.

ಓಮಿಕ್ರಾನ್ ತಡೆಗೆ 18 ಲಕ್ಷ ವಿಶೇಷ ಬೆಡ್ ವ್ಯವಸ್ಥೆ ಮಾಡಲಾಗಿದೆ. 5 ಲಕ್ಷ ಆಕ್ಸಿಜನ್ ಸಪೋರ್ಟ್ ಬೆಡ್ ಮೀಸಲಿಡಲಾಗಿದೆ. 1.40 ಲಕ್ಷ ಐಸಿಯು ಬೆಡ್ಸ್, 3000 ಪಿಎಸ್ಎ ಆಕ್ಸಿಜನ್ ಪ್ಲಾಂಟ್ಸ್, 4 ಲಕ್ಷ ಆಕ್ಸಿಜನ್ ಸಿಲಿಂಡರ್ಸ್ ತರಿಸಲಾಗಿದೆ ಎಂದರು.

ಕೊರೋನಾ ತೀವ್ರಗೊಂಡ ಬಳಿಕ 141 ಕೋಟಿ ಡೋಸ್ ವ್ಯಾಕ್ಸಿನ್ ನೀಡಲಾಗಿದೆ. ಶೇ.90 ಭಾರತೀಯರು ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. 15-18 ವರ್ಷದ ಮಕ್ಕಳಿಗೆ ಜನವರಿ 3ನೇ ತಾರೀಕಿನಿಂದ ಲಸಿಕೆ ನೀಡಲಾಗುವುದು ಎಂದರು.

Leave a Reply

Your email address will not be published. Required fields are marked *

error: Content is protected !!