February 3, 2026

ಕೋಟೆಕಾರ್ ಪಟ್ಟಣ ಪಂಚಾಯತ್ ಚುನಾವಣೆ:
ಅನಧಿಕೃತ 80 ಮತದಾರರ ಚೀಟಿ ಪತ್ತೆ

0
IMG-20211225-WA0054.jpg

ಮಂಗಳೂರು: ಕೋಟೆಕಾರ್ ಪಟ್ಟಣ ಪಂಚಾಯತ್ 12ನೇ ವಾರ್ಡ್ ಜಲಾಲ್ ಭಾಗ್ ನಲ್ಲಿ ಸುಮಾರು 80 ಕ್ಕೂ ಹೆಚ್ಚು ಅಧಿಕ ಅನಧಿಕೃತ ಮತದಾರರ ಪಟ್ಟಿಯಲ್ಲಿ ಹೆಸರು ನಮೂದಿಯಾಗಿದೆ.

ಒಂದೇ ಡೋರ್ ನಂಬರಿನಲ್ಲಿ ವಿವಿಧ ಧರ್ಮದ ನಲವತ್ತಕ್ಕೂ ಹೆಚ್ಚು ಮತದಾರರ ಹೆಸರು ನಮೂದಿಯಾಗಿದ್ದು, ರಾಜಕೀಯ ನಾಯಕನ ಕೈಯಲ್ಲಿ 40ಕ್ಕೂ ಹೆಚ್ಚು ಮತದಾರರ ಚೀಟಿ ಕಂಡುಬಂದಿದ್ದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.

ಮಾಜಿ ಸದಸ್ಯರೊಬ್ಬರು ಸುಲಭವಾಗಿ ಗೆಲ್ಲಲು ಮಾಡಿದ ಷಡ್ಯಂತ್ರವಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಗೀಡಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಅನಧಿಕೃತ ಹೆಸರುಗಳ ಬಗ್ಗೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ.

ಅದಲ್ಲದೆ ಇಲ್ಲಿನ ಪ್ರತಿಷ್ಟಿತ ವೈದ್ಯಕೀಯ ಕಾಲೇಜಿನಲ್ಲಿರುವ ಹೊರ ರಾಜ್ಯದ ವಿದ್ಯಾರ್ಥಿಗಳನ್ನು ಹೆಸರನ್ನು ತನ್ನ ರಾಜಕೀಯ ಲಾಬಕ್ಕಾಗಿ ನಮೂದಿಸಿದ್ದು, ಇದರ ಹಿಂದಿನ ರೂವಾರಿ ಯಾರು ಎನ್ನುವುದು ಬಹಿರಂಗಪಡಿಸಲಾಗದು ಎಂದು ಸ್ಥಳೀಯ ರಾಜಕೀಯ ನಾಯಕರೊಬ್ಬರು ಬಹಿರಂಗಪಡಿಸಿದ್ದಾರೆ. ಒಟ್ಟಿನಲ್ಲಿ ಚುನಾವಣೆಯ ದಿವಸ ಗೊಂದಲ ಸೃಷ್ಟಿಯಾಗುವ ಎಲ್ಲಾ ಸಾಧ್ಯತೆಯೂ ಕಂಡುಬರುತ್ತದೆ.

Leave a Reply

Your email address will not be published. Required fields are marked *

You may have missed

error: Content is protected !!