December 20, 2025

ಫೈಝಬಾದ್ ರೈಲು ನಿಲ್ದಾಣಕ್ಕೆ ಅಯೋಧ್ಯೆ ಕ್ಯಾಂಟ್ ನಾಮಕರಣ: ಯೋಗಿ ಆದಿತ್ಯನಾಥ್

0
Faizabad-to-Ayodhya.jpg

ಉತ್ತರ ಪ್ರದೇಶ: ಫೈಝಬಾದ್ ರೈಲು ನಿಲ್ದಾಣವನ್ನು ಮರುನಾಮಕರಣ ಮಾಡಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಚೇರಿ ಶನಿವಾರ ಟ್ವೀಟ್ ಮಾಡಿದೆ.

ಇನ್ನು ಮುಂದೆ ಫೈಝಾಬಾದನ್ನು ‘ಅಯೋಧ್ಯ ಕ್ಯಾಂಟ್’ ರೈಲು ನಿಲ್ದಾಣ ಎಂದು ಕರೆಯಲಾಗುವುದು, ಈ ನಿರ್ಧಾರವನ್ನು ಮುಖ್ಯಮಂತ್ರಿ ತೆಗೆದುಕೊಂಡಿದ್ದಾರೆ ಎಂದು ಟ್ವೀಟ್ ಮಾಡಿದೆ.

ಈ ಹಿಂದೆ 2018ರಲ್ಲಿ ಆದಿತ್ಯನಾಥ್ ಸರ್ಕಾರ ಫೈಝಬಾದ್ ಅನ್ನು ಅಯೋಧ್ಯೆ ಎಂದು ಮರುನಾಮಕರಣ ಮಾಡಿತ್ತು. ಬಿಜೆಪಿ ಸರ್ಕಾರವು ಅಲಹಾಬಾದ್ ಹೆಸರನ್ನು ಪ್ರಯಾಗ್ರಾಜ್ ಮತ್ತು ಮುಘಲ್ಸರಾಯ್ ರೈಲ್ವೆ ಜಂಕ್ಷನ್ ಎಂದು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್ ಎಂದು ಬದಲಾಯಿಸಿತ್ತು.

ಪ್ರತಿಪಕ್ಷವು ಈ ಕ್ರಮವನ್ನು ರಾಜಕೀಯ ಲಾಭಕ್ಕಾಗಿ “ಹಿಂದೂ ಭಾವನೆಗಳೊಂದಿಗೆ ಆಟವಾಡುವ” ಪ್ರಯತ್ನ ಎಂದು ಬಣ್ಣಿಸಿದೆ.

ಆದಾಗ್ಯೂ, ಮರುನಾಮಕರಣವನ್ನು ಸಮರ್ಥಿಸಿದ ಮುಖ್ಯಮಂತ್ರಿ, ಇದು ಸ್ಥಳದ “ಶ್ರೀಮಂತ ಐತಿಹಾಸಿಕ ಮತ್ತು ಸಾಂಸ್ಕೃತಿಕ ಗುರುತನ್ನು ಮರುಸ್ಥಾಪಿಸುವ” ಪ್ರಯತ್ನಗಳ ಭಾಗವಾಗಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *

You may have missed

error: Content is protected !!