March 13, 2026

ಬಿಗ್ ಬಾಸ್ ಸೀಸನ್ 12ರಲ್ಲಿ ಎಂಟ್ರಿಕೊಟ್ಟ ಬೆನ್ನಲ್ಲೇ ಎಲಿಮಿನೇಶನ್ ಆದ್ ರಕ್ಷಿತಾ ಶೆಟ್ಟಿ: ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

0
image_editor_output_image-530285296-1759215536920.jpg

ಮಂಗಳೂರು: ತುಳನಾಡಿನ ಬೆಡಗಿ ಯುಟ್ಯೂಬರ್ ರಕ್ಷಿತಾ ಶೆಟ್ಟಿ ಅವರನ್ನು 24 ಗಂಟೆಯಲ್ಲೇ ಬಿಗ್ ಬಾಸ್ ನಿಂದ ಹೊರಕ್ಕೆ ಹಾಕಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ತುಳುನಾಡ ಹುಡುಗಿಯನ್ನು ಕರೆಸಿ ಅವಮಾನ ಮಾಡುವಂತದ್ದು ಏನಿತ್ತು ಎಂದು ಹಲವರು ಪ್ರಶ್ನಿಸಿದ್ದಾರೆ.

ಬಿಗ್ ಬಾಸ್ ಸೀಸನ್ 12 ರಲ್ಲಿ ಮಂಗಳೂರಿನಿಂದ ತುಳುನಾಡ ಬೆಡಗಿ ರಕ್ಷಿತಾ ಶೆಟ್ಟಿ ಎಂಟ್ರಿ ಕೊಟ್ಟಿದ್ದರು. ಮೊದಲನೇ ದಿನವೇ ಸುದೀಪ್ ಜೊತೆ ಉತ್ತಮ ಕನ್ನಡ ಮಾತನಾಡಿ ಎಂಟರ್ ಟೈನ್ ಮೆಂಟ್ ಕೊಟ್ಟಿದ್ದರು, ಅಲ್ಲದೆ ಬಿಗ್ ಬಾಸ್ ಮನೆಯಲ್ಲಿ ಉತ್ತಮ ಕಂಟೆಸ್ಟೆಂಟ್ ಎಂದು ಎಲ್ಲರೂ ಹೇಳಿದ್ದರು,

ಆದರೆ ಬಿಗ್ ಬಾಸ್ ಮನೆ ಎಂಟ್ರಿಕೊಟ್ಟ ಬೆನ್ನಲ್ಲೇ ಆದ ಎಲಿಮಿನೇಶನ್ ಟಾಸ್ಕ್ ನಲ್ಲಿ ಕನ್ನಡ ಸರಿಯಾಗಿ ಮಾತನಾಡಲು ಬರುವುದಿಲ್ಲ ಎಂಬ ಕಾರಣಕೊಟ್ಟು ರಕ್ಷಿತಾ ಅವರನ್ನು ಎಲಿಮಿನೆಟ್ ಮಾಡಿದ್ದಾರೆ.

ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಒಂದೇ ದಿನದಲ್ಲಿ ಆಕೆಯನ್ನು ಕಳುಹಿಸಬಾರದಿತ್ತು ಎಂದು ಕಮೆಂಟ್ ಮಾಡಿದ್ದಾರೆ. ರಕ್ಷಿತಾ ಎಲಿಮಿನೇಷನ್ ನಿಜಕ್ಕೂ ಟ್ವಿಸ್ಟ್ ಇರಬಹುದೇ ಅಥವಾ ತಮಾಷ ಆಗಿರಬಹುದೇ ಎನ್ನುವುದನ್ನು ಕಾದು ನೋಡಬೇಕಿದೆ. ಇನ್ನೊಂದೆಡೆ ಸ್ಪರ್ಧಿಗಳು ಪರಸ್ಪರ ಪರಿಚಯ ಮಾಡಿಕೊಂಡು ದಿನ ದೂಡುತ್ತಿದ್ದಾರೆ. ರಕ್ಷಿತಾ ಅವರಿಗೆ ಮತ್ತೊಂದು ಅವಕಾ ಸಿಗಬೇಕು. ಇಷ್ಟು ಬೇಗ ಅವರನ್ನು ಹೊರಗೆ ಕಳುಹಿಸಬಾರದಿತ್ತು. ಬಿಗ್ ಬಾಸ್ ನ ಈ ನಿರ್ಧಾರ ಸರಿಯಲ್ಲ ಎಂದು ಅನೇಕರು ಮಾತನಾಡಿಕೊಳ್ಳುತ್ತಿದ್ದಾರೆ. ರಕ್ಷಿತಾ ಶೆಟ್ಟಿ ಎಲಿಮಿನೇಟ್‌ ಆಗಿರುವ ವಿಚಾರವನ್ನು ʼಕಲರ್ಸ್‌ ಕನ್ನಡʼದಲ್ಲಿ ಅಧಿಕೃತವಾಗಿ ಪೋಸ್ಟ್‌ ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!