ವಿಶಾಖಪಟ್ಟಣಂ ಸ್ಟೀಲ್ ಕಾರ್ಖಾನೆಯಲ್ಲಿ ಬೆಂಕಿ ಅವಘಡ:
ಎರಡು ಟ್ರಕ್‌ಗಳು ಸುಟ್ಟು ಕರಕಲು
ಆಂಧ್ರಪ್ರದೇಶ: ವಿಶಾಖಪಟ್ಟಣಂನಲ್ಲಿರುವ ವಿಶಾಖಪಟ್ಟಣಂ ಸ್ಟೀಲ್ ಕಾರ್ಖಾನೆಯಲ್ಲಿ ಶನಿವಾರ ಬೆಂಕಿ ಕಾಣಿಸಿಕೊಂಡಿದೆ. ಬ್ಲಾಸ್ಟ್ ಫರ್ನೇಸ್ ಪ್ಲಾಂಟ್ -2 ರಲ್ಲಿ, ಪೈಪ್‌ನಲ್ಲಿ ರಂಧ್ರವನ್ನು ಕೊರೆದು ಸ್ಟೀಲ್ ದ್ರವ ಬಿದ್ದಿದೆ. ಇದರಿಂದ ಭಾರಿ ಬೆಂಕಿ ಕಾಣಿಸಿಕೊಂಡಿದೆ.
ಬೆಂಕಿಯಲ್ಲಿ ಎರಡು ಟ್ರಕ್‌ಗಳು ಸುಟ್ಟು ಕರಕಲಾಗಿವೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಆದರೆ, ಅಪಘಾತದಲ್ಲಿ ಯಾರಿಗೂ ಗಾಯಗಳಾಗಿಲ್ಲ. ಬೆಂಕಿ ಅವಘಡದಲ್ಲಿ 1 ಕೋಟಿ(1crore) ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿ ಹಾನಿಯಾಗಿದೆ ಎನ್ನಲಾಗಿದೆ. ಈ ಬಗ್ಗೆ ತನಿಖೆ ನಡೆಸಲು ಆಡಳಿತ ಮಂಡಳಿ ಆದೇಶ ನೀಡಿದೆ. ಅಗ್ನಿ ಅವಘಡದ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ.




