March 22, 2026

ಖ್ಯಾತ ತಮಿಳು ಹಾಸ್ಯ ನಟ ವಡಿವೇಲು ಗೆ ಕೋವಿಡ್-19, ಒಮಿಕ್ರಾನ್ ಶಂಕೆ: ಆಸ್ಪತ್ರೆಗೆ ದಾಖಲು

0
88475975.jpg

ಚೆನ್ನೈ: ಕೋವಿಡ್-19 ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ನಟ ವಡಿವೇಲು ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಸಿನಿಮಾ ಶೂಟಿಂಗ್‌ ಮುಗಿಸಿ ಲಂಡನ್‌ನಿಂದ ಗುರುವಾರ ವಾಪಸಾಗಿದ್ದರು. ಬಂದ ಮೇಲೆ, ತಮಿಳು ಹಾಸ್ಯನಟ ವಡಿವೇಲು ಅವರಿಗೆ ಕೋವಿಡ್-19 ಸೋಂಕು ತಗುಲಿದ್ದು, ಅವರನ್ನು ಚೆನ್ನೈನ ಪೋರೂರಿನ ಶ್ರೀರಾಮಚಂದ್ರ ವೈದ್ಯಕೀಯ ಕೇಂದ್ರಕ್ಕೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಇತ್ತೀಚೆಗೆ ಯುಕೆಯಿಂದ ಹಿಂದಿರುಗಿದ ಅವರಿಗೆ, ಒಮಿಕ್ರಾನ್ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದೆ. ವಡಿವೇಲು ಅವರ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದರು.

ವಡಿವೇಲು, ಸಂಗೀತ ನಿರ್ದೇಶಕ ಸಂತೋಷ್ ನಾರಾಯಣನ್ ಮತ್ತು ನಿರ್ದೇಶಕ ಸೂರಜ್, ನಾಯಿ ಶೇಖರ್ ರಿಟರ್ನ್ಸ್‌ನ ಪ್ರಿ-ಪ್ರೊಡಕ್ಷನ್ ಕೆಲಸಕ್ಕಾಗಿ ಲಂಡನ್ ಗೆ(UK) ಹೋಗಿದ್ದರು. ಲಂಡನ್‌ನಿಂದ ಹಿಂದಿರುಗಿದ ನಂತರ, ವಡಿವೇಲುಗೆ ಕೋವಿಡ್-19 ಸೋಂಕು ತಗುಲಿದೆ.

Leave a Reply

Your email address will not be published. Required fields are marked *

error: Content is protected !!