September 21, 2026

ನಾನು ಪುಷ್ಪನಮನ ಸಲ್ಲಿಸಿದ್ದೇನೆಯೇ ಹೊರತು ABVP ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ: ಗೃಹ ಸಚಿವ ಪರಮೇಶ್ವರ್‌ 

0
image_editor_output_image493110019-1757572688280.jpg

ಬೆಂಗಳೂರು: ನಾನು ದಾರಿಯಲ್ಲಿ ಬರುತ್ತಿದ್ದಾಗ ರಾಣಿ ಅಬ್ಬಕ್ಕನ ಮೆರವಣಿಗೆ ನಡೆಯುತ್ತಿತ್ತು. ಪುಷ್ಪನಮನ ಸಲ್ಲಿಸಿ ಎಂದಾಗ ನಾನು ನಮನ ಸಲ್ಲಿಸಿದ್ದೇನೆಯೇ ಹೊರತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ ಎಂದು ಗೃಹ ಸಚಿವ ಪರಮೇಶ್ವರ್‌ ಹೇಳಿದ್ದಾರೆ.

ತಿಪಟೂರಿನ ಎಬಿವಿಪಿ ಕಾರ್ಯಕ್ರಮದಲ್ಲಿ ಭಾಗಿಯಾದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಎಬಿವಿಪಿ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ. ನನ್ನ ಕಾಂಗ್ರೆಸ್ ಬದ್ಧತೆ, ಸೈದ್ಧಾಂತಿಕ ನಿಲುವು ಯಾರೂ ಪ್ರಶ್ನೆ ಮಾಡುವಂತಿಲ್ಲ. ನಾನು ಏನು ಎನ್ನುವುದು ಇಡೀ ಕರ್ನಾಟಕ ಜನಕ್ಕೆ ಗೊತ್ತಿದೆ ಎಂದು ತಿಳಿಸಿದರು.

 

Leave a Reply

Your email address will not be published. Required fields are marked *

You may have missed

error: Content is protected !!