September 21, 2026

ಬಂಟ್ವಾಳ: ಕಾಮಾಲೆ ರೋಗಕ್ಕೆ ಯುವಕ ಬಲಿ

0
image_editor_output_image-802504295-1757573091536.jpg

ಬಂಟ್ವಾಳ : ಕಾಮಾಲೆ ರೋಗಕ್ಕೆ ಬಂಟ್ವಾಳದಲ್ಲಿ ಯುವಕನೋರ್ವ ಬಲಿಯಾಗಿದ್ದಾನೆ. ಸಾಣೂರು ಪದವು ನಿವಾಸಿ, ಸಂದೀಪ್ (22) ಮೃತ ಯುವಕ. ಅವರು ಚಿಕಿತ್ಸೆಗೆ ಸ್ಪಂದಿಸದೆ ವೆಸ್ಲಾಕ್ ಆಸ್ಪತ್ರೆಯಲ್ಲಿ ಸೆ 5 ರಂದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಸಂಗಬೆಟ್ಟಿಗೆ ಕೂಲಿ ಕೆಲಸಕ್ಕೆ ಹೋಗಿದ್ದ ಸಂದೀಪ್ ತಲೆ ತಿರುಗಿ ಬಿದ್ದಿದ್ದರು. ಪರಿಣಾಮ ಸೊಂಟಕ್ಕೆ ಏಟಾಗಿದ್ದು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಸೆ.5 ರಂದು ನೋವು ಉಲ್ಬಣಗೊಂಡ ಕಾರಣ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯರು ಪರೀಕ್ಷಿಸಿ ವೆನ್ಹಾಕ್‌ಗೆ ಕರೆದೊಯ್ಯುವಂತೆ ಸೂಚಿಸಿದ್ದರು.

 

Leave a Reply

Your email address will not be published. Required fields are marked *

You may have missed

error: Content is protected !!