ಅಫ್ಘಾನಿಸ್ತಾನದಲ್ಲಿ 6.3ರಷ್ಟು ತೀವ್ರತೆಯ ಭೂಕಂಪ: 250ಕ್ಕೂ ಹೆಚ್ಚು ಜನ ಮೃತ್ಯು, 500ಕ್ಕೂ ಹೆಚ್ಚು ಜನರು ಗಾಯ
ಕಾಬೂಲ್: ಇಂದು ಮುಂಜಾನೆ ಅಫ್ಘಾನಿಸ್ತಾನದಲ್ಲಿ 6.3ರಷ್ಟು ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಪಾಕಿಸ್ತಾನದ ಕೆಲವು ಭಾಗಗಳು ಸೇರಿದಂತೆ ಈ ಪ್ರದೇಶದಾದ್ಯಂತ ಕಂಪನದ ಅನುಭವವಾಗಿದೆ.
ಈ ಕಂಪನಕ್ಕೆ ಸುಮಾರು 250ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಸುಮಾರು 500 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.





