ಉಡುಪಿ: 11ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ಉಡುಪಿ ನಗರ ಪೊಲೀಸ್ ವ್ಯಾಪ್ತಿಯ ಪ್ರಕರಣವೊಂದಕ್ಕೆ ಸಂಬಂಧಿಸಿ ಕಳೆದ 11ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಗದಗ ಜಿಲ್ಲೆಯ ನರಗುಂದ ಮಾರುತಿ ನಗರದ ಸಂಜು ಪತ್ತಾರ್ ಯಾನೆ ಸಂಜು ಬಡಿಗೇರ್(36) ಎಂದು ಗುರುತಿಸಲಾಗಿದೆ.
ಈತ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಕಳೆದ 11 ವರ್ಷಗಳಿಂದ ತಲೆಮರೆಸಿಕೊಂಡಿದ್ದು, ಖಚಿತ ಮಾಹಿತಿ ಮೇರೆಗೆ ಉಡುಪಿ ನಗರ ಪೊಲೀಸ್ ಠಾಣೆಯ ಸಿಬಂದಿ ರಾಘವೇಂದ್ರ ಮತ್ತು ಆನಂದಯ್ಯ ಎಂಬವರು ಬೆಳಗಾವಿಯ ಅನಗೋಳಿಯ ಅಂಬೇಡ್ಕರ್‌ಲ್ಲಿ ಎಂಬಲ್ಲಿ ಆಗಸ್ಟ್ 30ರಂದು ವಶಕ್ಕೆ ಪಡೆದು ಬಂಧಿಸಿದ್ದಾರೆ.





