January 31, 2026

ಹಿಂದಿ ಕಿರುತೆರೆ ನಟಿ ಪ್ರಿಯಾ ಕ್ಯಾನ್ಸರ್ ಗೆ ಬಲಿ

0
image_editor_output_image1469801564-1756637466470.jpg

ಮುಂಬೈ: ಹಿಂದಿ ಕಿರುತೆರೆ ನಟಿಯೊಬ್ಬರು ಕ್ಯಾನ್ಸರ್ ನಿಂದ ಮೃತಪಟ್ಟಿದ್ದಾರೆ. ಪವಿತ್ರಾ ರಿಶ್ತಾ ಧಾರಾವಾಹಿಯಲ್ಲಿ ವರ್ಷಾ ಪಾತ್ರದಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದ ನಟಿ ಪ್ರಿಯಾ ಮರಾಠೆ 38 ವಯಸ್ಸಿಗೆ ನಿಧನರಾಗಿದ್ದಾರೆ.

ನಟಿ ಪ್ರಿಯಾ ಎರಡು ವರ್ಷಗಳಿಗೂ ಹೆಚ್ಚು ಕಾಲ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅವರು ಮೀರಾ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ನಸುಕಿನ 4 ಗಂಟೆಗೆ ನಿಧನರಾಗಿದ್ದಾರೆ. ಪ್ರಿಯಾ ಅವರು ಪತಿ, ನಟ ಶಾಂತನು ಮೋಘೆ ಅವರನ್ನು ಅಗಲಿದ್ದಾರೆ. ಪ್ರಿಯಾ ಅವರು ‘ಯಾ ಸುಖನೋ ಯಾ’ ಧಾರವಾಹಿ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದರು. ನಂತರ ‘ಚಾರ್ ದಿವಸ್ ಸಸುಚೆ’ ಸೇರಿದಂತೆ ಹಲವು ಮರಾಠಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅವರು ಕಾಮಿಡಿ ಸರ್ಕಸ್‌ನ ಭಾಗವೂ ಆಗಿದ್ದರು.

ಆಕೆ ‘ಬಡೇ ಅಚ್ಚೆ ಲಗ್ತೆ ಹೈ’ನಲ್ಲಿ ಜ್ಯೋತಿ ಮಲ್ಹೋತ್ರಾ ಪಾತ್ರದಲ್ಲಿ ನಟಿಸಿದ್ದರು. ‘ತು ತಿಥೆ ಮಿ’ ಧಾರವಾಹಿಯಲ್ಲಿಯೂ ಕೆಲಸ ಮಾಡಿದ್ದಾರೆ. ಪ್ರಿಯಾ ಮತ್ತು ಶಾಂತನು 2012 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

Leave a Reply

Your email address will not be published. Required fields are marked *

error: Content is protected !!