January 31, 2026

ಸಾಲಬಾಧೆ: 4 ವರ್ಷದ ಮಗುವಿಗೆ ವಿಷಪ್ರಾಶನ ಮಾಡಿ ದಂಪತಿಗೆ ಆತ್ಮಹತ್ಯೆ

0
image_editor_output_image-1435210769-1756546166524.jpg

ಶಹಜಹಾನ್ಪುರ: ಕೈಮಗ್ಗ ಉದ್ಯಮಿ ಯೊಬ್ಬರು ತಮ್ಮ ನಾಲ್ಕು ವರ್ಷದ ಮಗನಿಗೆ ವಿಷಪ್ರಾಶನ ಮಾಡಿ ನಂತರ ತಾವೂ ಕೂಡಾ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಶಹಜಹಾನ್ಪುರದಲ್ಲಿ ನಡೆದಿದೆ.

ರೋಜಾ ಪೊಲೀಸ್ ಠಾಣೆ ವ್ಯಾಪ್ತಿಯ ದುರ್ಗಾ ಎನ್‌ಕ್ಲೇವ್ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಬುಧವಾರ ಬೆಳಗ್ಗೆ, ಬಾಲಕ ಹಾಸಿಗೆಯ ಮೇಲೆ ಶವವಾಗಿ ಪತ್ತೆಯಾಗಿದ್ದು, ಆತನ ಪೋಷಕರನ್ನು ಸಚಿನ್ ಗ್ರೋವರ್ ಮತ್ತು ಅವರ ಪತ್ನಿ ಶಿವಾಂಗಿ ಎಂದು ಗುರುತಿಸಲಾಗಿದ್ದು, ಅವರ ಮನೆಯ ಪ್ರತ್ಯೇಕ ಕೋಣೆಗಳಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸಾಲಬಾಧೆಯೇ ಇವರು ಈ ತಪ್ಪು ಹೆಜ್ಜೆ ಇಡಲು ಕಾರಣ ಎಂದು ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!