ಬೆಳ್ತಂಗಡಿ: ಎಸ್ಐಟಿ ಕಚೇರಿಗೆ ಬಂದ ಸೌಜನ್ಯ ತಾಯಿ: ಎಸ್‌ಐಟಿ ಭೇಟಿ ನಿರಾಕರಿಸಿದ ಪೊಲೀಸರು
ಬೆಳ್ತಂಗಡಿ: ಯುಟ್ಯೂಬ್ ಒಂದರಲ್ಲಿ ಸೌಜನ್ಯ ಕೊಲೆ ಬಳಿಕ ಅವಳ ಮೃತದೇಹ ನೋಡಿದ್ದಾಗಿ ನೀಡಿದ್ದ ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು ದೂರು ನೀಡಲು ಸೌಜನ್ಯ ತಾಯಿ ಇಂದು ಬೆಳ್ತಂಗಡಿ ಎಸ್ ಐಟಿ ಕಚೇರಿಗೆ ಆಗಮಿಸಿದ್ದರು. ಆದರೆ ಪೂರ್ವ ಮಾಹಿತಿ ನಿಡದ ಹಿನ್ನಲೆ ಪೊಲೀಸರು ಭೇಟಿಯನ್ನು ನಿರಾಕರಿಸಿದ್ದಾರೆ.
ಚೆನ್ನಯ್ಯ ಎಂಬ ಮಾಸ್ಕ್ ಮ್ಯಾನ್ ಅತ್ಯಾಚಾರಗೊಂಡ ಸೌಜನ್ಯ ಮೃತ ದೇಹ ನೋಡಿರುವುದಾಗಿ ಎಸ್ಐಟಿಗೆ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಧರ್ಮಸ್ಥಳ ಕುರಿತ ಆಪಾದನೆಗಳನ್ನು ಆಧಾರವನ್ನಾಗಿಸಿಕೊಂಡು, ಅಧಿಕೃತ ದೂರು ಹಾಗೂ ಹೇಳಿಕೆಗಳನ್ನು ಸಲ್ಲಿಸಲು ಕುಸುಮಾವತಿ ತೀರ್ಮಾನಿಸಿದ್ದರು.
ಕಾರಿನಲ್ಲಿ ಕುಸುಮಾವತಿ ಬೆಳ್ತಂಗಡಿ ಠಾಣೆಗೆ ಆಗಮಿಸಿದ್ದಾರೆ. ಈ ವೇಳೆ ಅವರನ್ನು ತಡೆದ ಪೊಲೀಸರು ಭೇಟಿ ಸಂಬಂಧ ಅನುಮತಿ ಪಡೆದಿದ್ದೀರಾ ಎಂದು ಕೇಳಿದ್ದಾರೆ. ಈ ಪ್ರಶ್ನೆಗೆ ಅನುಮತಿ ಪಡೆದಿಲ್ಲ ಎಂದು ಉತ್ತರಿಸಿದ್ದಾರೆ. ಅನುಮತಿ ಪಡೆಯದ ಕಾರಣ ಭೇಟಿಗೆ ಅವಕಾಶವಿಲ್ಲ ಎಂದು ಹೇಳಿ ಅವರನ್ನು ವಾಪಸ್ ಕಳುಹಿಸಿದ್ದಾರೆ. ಪೊಲೀಸರು ಅವಕಾಶ ನಿರಾಕರಿಸಿದ ಹಿನ್ನೆಲೆಯಲ್ಲಿ ಕುಸುಮಾವತಿ ಕಾರಿನಿಂದ ಇಳಿಯದೇ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ತೆರಳಿದರು.




